ಕರ್ನಾಟಕ

karnataka

ETV Bharat / state

ನೀರು - ಜಗತ್ತಿಗೆ ಸುಪ್ತ ಬೆದರಿಕೆ,ನಾವು ಬೇಗನೆ ಎಚ್ಚರಗೊಳ್ಳದಿದ್ದರೆ ದೊಡ್ಡ ದುರಂತ ಕಾದಿದೆ. ! - ನೀರಿನ ಸಮಸ್ಯೆ

ನೀರಿನ ಕೊರತೆಯು ವಿಶ್ವದ ದೇಶಗಳಿಗೆ ಸಾಮಾನ್ಯ ಕಾರ್ಯಸೂಚಿಯಾಗಿ ಪರಿಣಮಿಸಿದೆ. ಒಟ್ಟು ನೀರಿನ ಅವಶ್ಯಕತೆಗಳಲ್ಲಿ 69% ಕೃಷಿಗೆ ಬಳಸಲಾಗುತ್ತಿದೆ. ಕೈಗಾರಿಕೆಗಳು, ಇಂಧನ ಉತ್ಪನ್ನಗಳು, ಮೀನುಗಾರಿಕೆ ನೀರಿನ ಕೊರತೆಯ ಹೀನ ಪರಿಸ್ಥಿತಿಗೆ ಒಳಗಾಗಿವೆ. ವಿಶ್ವ ಸಂಸ್ಥೆಯ ಕೃಷಿ ಅಭಿವೃದ್ಧಿ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ, ನೀರಿನ ಸಂರಕ್ಷಣೆಯ ಪ್ರಯತ್ನ ಈಗಾಗಲೇ ತಡವಾಗಿದೆ ಮತ್ತು ವಿಶ್ವದ ಪ್ರತಿಯೊಬ್ಬರೂ ದೃಢವಾದ ನಿಶ್ಚಯದಿಂದ ಕೆಲಸ ಮಾಡಬೇಕಾಗಿದೆ ಎಂದು ವರದಿಯ ಮೂಲಕ ಎಚ್ಚರಿಸಿದೆ. ಹವಾಮಾನದಲ್ಲಾಗುತ್ತಿರುವ ವೈಪರೀತ್ಯದಿಂದಾಗಿ ನೀರಿನ ತಾಪಮಾನ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ, ನೀರಿನಲ್ಲಿ ಆಮ್ಲಜನಕದ ಪ್ರಮಾಣವು ಕ್ಷೀಣಿಸಿ ನೀರಿನ ಗುಣಮಟ್ಟ ಕಡಿಮೆಯಾಗುತ್ತಿದೆ.

dfsdsd
ಜಗತ್ತಿನಲ್ಲಿ ನೀರಿಗಾಗಿ ಹಾಹಾಕಾರ

By

Published : Aug 11, 2020, 4:04 PM IST

ಬೆಂಗಳೂರು:ನೈಸರ್ಗಿಕ ಸಂಪನ್ಮೂಲಗಳ ಮೇಲಾಗುತ್ತಿರುವ ತ್ವರಿತ ಪರಿಸರ ಬದಲಾವಣೆಗಳಿಂದಾಗಿ ಇಡೀ ವಿಶ್ವದ ಜನಸಂಖ್ಯೆಯು ಉಸಿರುಗಟ್ಟುವ ವಾತಾವರಣದಲ್ಲಿ ಬದುಕುತ್ತಿದೆ. ವಿಶ್ವದ ಜನಸಂಖ್ಯೆಯು ಪ್ರಸ್ತುತ ಸುಮಾರು 780 ಕೋಟಿ. ಈ ಪೈಕಿ 220 ಕೋಟಿ ಜನರಿಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯವಿಲ್ಲ. 420 ಕೋಟಿ ಜನರಿಗೆ ಸರಿಯಾದ ನೈರ್ಮಲ್ಯ ಸೌಲಭ್ಯಗಳು ಕೂಡ ಲಭ್ಯವಿಲ್ಲ.

ವಿಶ್ವಸಂಸ್ಥೆಯ ವಿಶ್ವ ಜಲ ಅಭಿವೃದ್ಧಿ ಮಂಡಳಿಯ ವರದಿಯ (2020) ಪ್ರಕಾರ, ಪರಿಸರದ ಮೇಲಾಗುತ್ತಿರುವ ಬೆಳವಣಿಗೆಗಳು ಗುಣಮಟ್ಟದ ನೀರಿನ ಲಭ್ಯತೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಿವೆ. ಸಮಗ್ರ ಅಭಿವೃದ್ಧಿಯ ಉದ್ದೇಶಗಳಿಗಾಗಿ ವಿಶ್ವದ ರಾಷ್ಟ್ರಗಳು ಎಚ್ಚರಗೊಂಡು ವಿಶ್ವ ಸಂಸ್ಥೆ ನೀಡಿರುವ ಆದೇಶದಂತೆ ಮುಂದುವರಿಯದಿದ್ದರೆ 2030 ರ ವೇಳೆಗೆ ಎಲ್ಲರಿಗೂ ನೀರನ್ನು ಸಂರಕ್ಷಿಸುವ ಮಹತ್ವಾಕಾಂಕ್ಷೆ, ನೈರ್ಮಲ್ಯ ಸ್ಥಿತಿಗತಿಗಳನ್ನು ಒದಗಿಸಲಾಗುವುದಿಲ್ಲ ಎಂದು ಅದು ಎಚ್ಚರಿಸಿದೆ.

ಎಲ್ಲಾ ದೇಶಗಳಿಗೂ ಕಾಡುತ್ತಿರುವ ಸಮಸ್ಯೆ!

ಕಳೆದ ನೂರು ವರ್ಷಗಳಲ್ಲಿ ನೀರಿನ ಬಳಕೆ ಪ್ರಮಾಣ ಆರು ಪಟ್ಟು ಹೆಚ್ಚಾಗಿದೆ. ಒಂದೆಡೆ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ. ಮತ್ತೊಂದೆಡೆ ಹವಾಮಾನ ಬದಲಾವಣೆಗಳು ಶಾಪವಾಗಿ ಮಾರ್ಪಟ್ಟಿವೆ. ಇದರ ಪರಿಣಾಮವಾಗಿ ಸೂಪರ್ ಚಂಡಮಾರುತಗಳು, ಪ್ರವಾಹಗಳು, ಬರ ಮತ್ತು ವಿಶ್ವದ ದೇಶಗಳಿಗೆ ಇದು ಸಮಸ್ಯೆಗಳಾಗಿ ಮಾರ್ಪಟ್ಟಿದೆ. ಪರಿಣಾಮವಾಗಿ ನೀರಿನ ಮೇಲಿನ ಒತ್ತಡ ಗಮನಾರ್ಹವಾಗಿ ಹೆಚ್ಚಾಗಿದೆ. ವಾಸ್ತವವಾಗಿ, ಅನೇಕ ದೇಶಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಸಮಯ ಇದು. ವಿಶ್ವ ಸಂಪನ್ಮೂಲ ಮಂಡಳಿಯ (2019) ಅಂಕಿಅಂಶಗಳ ಪ್ರಕಾರ, ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಗಳಲ್ಲಿ ಕತಾರ್ ಮೊದಲ ಸ್ಥಾನದಲ್ಲಿದೆ ಮತ್ತು ಭಾರತ 13 ನೇ ಸ್ಥಾನದಲ್ಲಿದೆ. ನೀರಿನ ಕೊರತೆಯ ಪ್ರಮಾಣದಲ್ಲಿ ವ್ಯತ್ಯಾಸವಿರಬಹುದು ಎಂದು ತಜ್ಞರು ಸ್ಪಷ್ಟಪಡಿಸುತ್ತಾರೆ.ಆದರೆ ಭವಿಷ್ಯದಲ್ಲಿ, ವಿಶ್ವದ ಎಲ್ಲಾ ದೇಶಗಳು ನೀರಿನ ಕೊರತೆಯನ್ನು ಎದುರಿಸುವುದು ಖಚಿತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೈಸರ್ಗಿಕ ಜಲಮೂಲಗಳು, ಸರೋವರಗಳು ತಮ್ಮನ್ನು ಸ್ವಚ್ಚಗೊಳಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಬರ ಮತ್ತು ಕ್ಷಾಮದ ಸಮಯದಲ್ಲಿ, ಮಾಲಿನ್ಯಕಾರಕಗಳು ಹೆಚ್ಚಾಗಿ ನೀರು ಕಲುಷಿತಗೊಳ್ಳುತ್ತದೆ. ಈ ಎಲ್ಲದರ ದುಷ್ಪರಿಣಾಮಗಳು ಅಂತಿಮವಾಗಿ ಆಹಾರ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹವಾಮಾನ, ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ರೋಗಗಳು ಮತ್ತು ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಜನರು ಇತರ ಸ್ಥಳಗಳಿಗೆ ವಲಸೆ ಹೋಗುತ್ತಾರೆ. ಪರಿಸ್ಥಿತಿ ಎಷ್ಟು ಗಂಭೀರವಾಗುತ್ತದೆಯೆಂದರೆ ಜನರು ಕಷ್ಟಗಳಿಂದ ಹೊರಬರಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಷ್ಟೇ ಅಲ್ಲ, ಕಾಡುಗಳ ನಾಶ ಮತ್ತು ಜವುಳು ಭೂಮಿಯಿಂದಾಗಿ, ಜೀವವೈವಿಧ್ಯತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಹವಾಮಾನ ಬದಲಾವಣೆಗಳಿಂದಾಗಿ ಸಂಭವಿಸುವ ಮಳೆ ಬೀಳುವುದರ ಮೇಲೆ ತೀವ್ರತರದ ವ್ಯತ್ಯಾಸಗಳು ಹಲವಾರು ರೀತಿಯ ಅನಿಶ್ಚಿತತೆಗೆ ಕಾರಣವಾಗುತ್ತವೆ. ಉಷ್ಣವಲಯದ ಪ್ರದೇಶಗಳಲ್ಲಿ ನೀರಿನ ಸಂಪನ್ಮೂಲಗಳ ಸವಕಳಿ ಕಂಡುಬರುತ್ತದೆ. ಅವುಗಳಲ್ಲಿ ಭಾರತವೂ ಒಂದು. ವಿಶ್ವ ನಕ್ಷೆಯಿಂದ ಕೆಲವು ಪ್ರದೇಶಗಳು ಕಣ್ಮರೆಯಾಗುವ ಅಪಾಯವಿದೆ. ಹವಾಮಾನ ಬದಲಾವಣೆಗಳ ಪರಿಣಾಮ ಹೆಚ್ಚಾಗಿ ಹಿಮ ಅವಲಂಬಿತ ನದಿಗಳ ಮೇಲೆ ಇರುತ್ತದೆ. ಪ್ರಪಂಚದ ದೇಶಗಳು ಎರಡು ವಿಧದ ಕಾರ್ಯತಂತ್ರದೊಂದಿಗೆ, ಸಮಸ್ಯೆ ಉಪಶಮನ ಬದಲಾವಣೆಗೆ ಮುಂದಾಗಬೇಕು. ಇದರ ಭಾಗವಾಗಿ, ಸಂಭವನೀಯ ಹವಮಾನ ಪರಿಸ್ಥಿತಿಗಳನ್ನು ವೈಜ್ಞಾನಿಕವಾಗಿ ಗ್ರಹಿಸಲು ಅವರಿಗೆ ಸಾಧ್ಯವಾಗುತ್ತದೆ. ಇದರೊಂದಿಗೆ ಹವಾಮಾನ ಬದಲಾವಣೆಗಳನ್ನು ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಅಂದಾಜು ಮಾಡಲು ಸಾಧ್ಯವಾಗುತ್ತದೆ.

ಅದರೊಂದಿಗೆ ಬದಲಾವಣೆಗಳ ತೀವ್ರತೆಯನ್ನು ನಾವು ಅಂದಾಜು ಮಾಡಬಹುದು ಮತ್ತು ಅದರ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದು. ಪರಿಹಾರವು ಕಾರ್ಬನ್ ಡೈಆಕ್ಸೈಡ್ ಮತ್ತು ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು ಮಾತ್ರ. ಇದು ದೊಡ್ಡ ಭೌಗೋಳಿಕ ಪ್ರದೇಶಗಳಿಗೆ ಸಂಬಂಧಿಸಿದೆ. ನೀರಿನ ಸಂಪನ್ಮೂಲಗಳ ಬಳಕೆ, ಅವುಗಳ ಮರುಬಳಕೆ, ಒಳಚರಂಡಿ ನಿರ್ವಹಣೆ ಇತ್ಯಾದಿಗಳು ಇದರಲ್ಲಿರುತ್ತವೆ. ಇದಕ್ಕೆ ಕಾರಣವೆಂದರೆ ಹಸಿರುಮನೆ ಅನಿಲಗಳ ಉತ್ಪಾದನೆಯ ಶೇಕಡಾ 3 ರಿಂದ 7 ರಷ್ಟು ಒಳಚರಂಡಿನಿಂದ ಬರುತ್ತಿದೆ.

ಉತ್ತಮ ಪರಿಸರಕ್ಕೆ ಪರಿಹಾರ

ಒಳಚರಂಡಿ ನೀರಿನಿಂದ ಹೊರಬರುವ ಮೀಥೇನ್ ಅನಿಲವು ಪ್ರಬಲ ಹಸಿರುಮನೆ ಅನಿಲವಾಗಿದೆ. ವಿಶ್ವಾದ್ಯಂತ, 80 ರಿಂದ 90 ರಷ್ಟು ಒಳಚರಂಡಿ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ಪರಿಸರಕ್ಕೆ ಬಿಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಜೋರ್ಡಾನ್, ಮೆಕ್ಸಿಕೊ, ಪೆರು, ಥೈಲ್ಯಾಂಡ್‌ನಂತಹ ದೇಶಗಳಲ್ಲಿ, ಆಧುನಿಕ ಒಳಚರಂಡಿ ನೀರು ಸಂಸ್ಕರಣೆಯ ಮೂಲಕ ಮೂಲಕ ಮೀಥೇನ್ ಅನ್ನು ಸಾವಯವ ವಸ್ತುಗಳಿಂದ ಬೇರ್ಪಡಿಸಲಾಗುತ್ತದೆ. ಇದರಿಂದ ಅಗತ್ಯವಾದ ಇಂಧನವನ್ನು ಉತ್ಪಾದಿಸಲಾಗುತ್ತದೆ. ಇದರೊಂದಿಗೆ ಕಾರ್ಬನ್ ಡೈಆಕ್ಸೈಡ್ ಮತ್ತು ಹಸಿರುಮನೆ ಅನಿಲಗಳು ಸಾವಿರಾರು ಟನ್‌ಗಳಲ್ಲಿ ಕಡಿಮೆಯಾಗುತ್ತವೆ. ಅಂತೆಯೇ, ಸಂಪ್ರದಾಯವಾದಿ ಕೃಷಿ ವಿಧಾನಗಳು ಮತ್ತು ತೇವಾಂಶ ಭೂಮಿಯನ್ನು ಸಂರಕ್ಷಸಿಸುವ ಮೂಲಕ ತೇವಾಂಶವನ್ನು ಕಾಪಾಡಿಕೊಳ್ಳಬಹುದು. ಭಾಗಶಃ ಹೊರಬಿಡುವ ನೀರನ್ನು ಮರುಬಳಕೆ ಮಾಡಿ ಸಂಸ್ಕರಿಸುವ ಮೂಲಕ ನೀರಿನ ತ್ಯಾಜ್ಯವನ್ನು ತೀವ್ರವಾಗಿ ಕಡಿಮೆಗೊಳಿಸಬಹದು. ಜಲಸಂಪನ್ಮೂಲ ನಿರ್ವಹಣೆ ಮತ್ತು ಉತ್ತಮ ನೈರ್ಮಲ್ಯ ಸೇವೆಗಳಿಗಾಗಿ ಸರ್ಕಾರವು ಸ್ವಯಂ ಸೇವಾ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಬೇಕಾಗಿದೆ.

ABOUT THE AUTHOR

...view details