ಕರ್ನಾಟಕ

karnataka

ETV Bharat / state

ಅಧಿಕಾರಿಯ ಅವೈಜ್ಞಾನಿಕ ನಿರ್ಧಾರವೇ ಹುಳಿಮಾವು ಕೆರೆ ಒಡೆತಕ್ಕೆ ಕಾರಣ: ಸತೀಶ್ ರೆಡ್ಡಿ ಆರೋಪ - ಅಧಿಕಾರಿಯ ಬೇಜಾವ್ದಾರಿತನ

ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಸುದ್ದಿ ಮಾಡಿದ್ದ ಹುಳಿಮಾವು ಕೆರೆ ಕಟ್ಟೆ ಅನಾಹುತಕ್ಕೆ ಕೊನೆಗೂ ಕಾರಣ ತಿಳಿದು ಬಂದಿದೆ.

walmark-behind-the-hulimavu-lake-tragedy
ಹುಳಿಮಾವು ಕೆರೆ

By

Published : Nov 29, 2019, 6:16 AM IST

ಬೆಂಗಳೂರು:ಹುಳಿಮಾವು ಕೆರೆ ತುಂಬಿ ಪಕ್ಕದ ಕಂಪನಿಯ ಕಡೆಗೆ ನೀರು ಹರಿದಿದೆ. ಆ ಕಂಪನಿ ಬಿಡಬ್ಲ್ಯೂಎಸ್ಎಸ್ಬಿಗೆ ಕೆರೆಯ ಸ್ವಲ್ಪ ನೀರನ್ನು ಹರಿಸಲು ಮನವಿ ಮಾಡಿತ್ತು. ಇನ್ನು ಅಪಾರ್ಟ್ಮೆಂಟ್​ನವರ ಹಿತದೃಷ್ಟಿಯಿಂದ ಬಿಡಬ್ಲ್ಯೂಎಸ್ಎಸ್ಬಿಯ ಮಹಿಳಾ ಅಧಿಕಾರಿ ಜೆಸಿಬಿ ಮೂಲಕ ಅವೈಜ್ಞಾನಿಕವಾಗಿ ಯಾವುದೇ ಮುಂಜಾಗ್ರತ ಕ್ರಮವನ್ನು ವಹಿಸದೆ ಕೆರೆಕಟ್ಟೆ ಒಡೆಯಲು ಹೋಗಿ ಇಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ಸತೀಶ್ ರೆಡ್ಡಿ

ಮಳೆ ಬಂದಾಗ ಅನಾಹುತ ಆಗುತ್ತೆ ಅಂತ ನಾವೆಲ್ಲ ಅಂದುಕೊಳ್ಳುತ್ತೇವೆ. ಆದ್ರೆ ಮಳೆ ನಿಂತಾದ ಮೇಲೆ ಉದ್ದೇಶ ಪೂರ್ವಕವಾಗಿ ಕೆರೆ ಕಟ್ಟೆಯನ್ನು ಒಡೆಯುತ್ತಾರೆ ಎಂದರೆ ಎಂತಹ ಬೇಜಾಬ್ದಾರಿಯ ಅಧಿಕಾರಿಗಳು ಇರುತ್ತಾರೆಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಪ್ರಾಥಮಿಕವಾಗಿ ಬಂದಿರುವ ಮಾಹಿತಿಯಂತೆ ಒಬ್ಬ ಮಹಿಳಾ ಅಧಿಕಾರಿ ಕೆರೆಕಟ್ಟೆ ಒಡೆಯಲು ಅನುಮತಿ ನೀಡಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ಆರೋಪಿಸಿದ್ದಾರೆ.

ಅಧಿಕಾರಿ ಆ ರೀತಿ ನಿರ್ದೇಶನ ನೀಡಬೇಕಾದರೆ ಮೊದಲು ಕೆರೆಯ ಪರಿಸ್ಥಿತಿಯನ್ನು ಗಮನಿಸಬೇಕಿತ್ತು. ಮೇಲಾಧಿಕಾರಿಗಳ ಅನುಮತಿಯನ್ನು ಪಡೆಯಬೇಕಿತ್ತು. ಈಗಾಗಲೇ ಇದರ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರನ್ನು ಬಿಡುವ ಮಾತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details