ಕರ್ನಾಟಕ

karnataka

ETV Bharat / state

ಕಾದು ನೋಡಿ ರಾಜಕಾರಣ ಇನ್ನೂ ಮಜವಾಗಿರುತ್ತೆ: ಬಿ ಕೆ ಹರಿಪ್ರಸಾದ್ - ರಾಷ್ಟ್ರೀಯ ಈಡಿಗ ಬಿಲ್ಲವ ನಾಮಧಾರಿ ದೀವರ ಮಹಾಮಂಡಳಿ

ನಿನ್ನೆ ರಾಷ್ಟ್ರೀಯ ಈಡಿಗ ಬಿಲ್ಲವ ನಾಮಧಾರಿ ದೀವರ ಮಹಾಮಂಡಳಿ ವಿಶೇಷ ಸಭೆಯಲ್ಲಿ ಬಿ ಕೆ ಹರಿಪ್ರಸಾದ್​ ಅವರು ಮಾತನಾಡಿರುವ ವಿಡಿಯೋವೊಂದು ವೈರಲ್​ ಆಗುತ್ತಿದೆ.

Congress leader BK Hariprasa
ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾ

By

Published : Jul 22, 2023, 5:22 PM IST

Updated : Jul 22, 2023, 6:01 PM IST

ವೈರಲ್​ ವಿಡಿಯೋ

ಬೆಂಗಳೂರು: ಕಾದು ನೋಡಿ‌ ರಾಜಕಾರಣ ಇನ್ನೂ ಮಜವಾಗಿರುತ್ತೆ. ಏನೇನು ಆಗುತ್ತದೋ ಕಾದು ನೋಡಿ ಎಂದು ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಸೂಚ್ಯವಾಗಿ ತಿಳಿಸಿದ್ದಾರೆ. ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ಅಸಮಾಧಾನದ ಬಗ್ಗೆ ನಾನು ಮಾತನಾಡುವುದಿಲ್ಲ. ನಿನ್ನೆ ರಾಷ್ಟ್ರೀಯ ಈಡಿಗ ಬಿಲ್ಲವ ನಾಮಧಾರಿ ದೀವರ ಮಹಾಮಂಡಳಿ ವಿಶೇಷ ಸಭೆಯಲ್ಲಿ ಮಾತನಾಡಿರುವ ಬಗ್ಗೆ ಮತ್ತೆ ಪ್ರತಿಕ್ರಿಯೆ ಕೊಡಲ್ಲ. ನಾನು ಏನು ಹೇಳುತ್ತೇನೋ ಅದಕ್ಕೆ ಬದ್ಧನಾಗಿರುತ್ತೇನೆ. ನಾನು ಒಂದು ಸರಿ ಹೇಳಿದ ಮಾತು ವಾಪಸ್ ತಗೆದುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಹೇಳದ ಮೇಲೆ ಅದು ನನ್ನ ಮಾತಲ್ಲ. ನಾನು ಹೇಳಿದ ಮೇಲೆ‌, ನನ್ನ ಮಾತಿಗೆ ಬದ್ಧನಾಗಿರುತ್ತೇನೆ; ನಿನ್ನೆ ಸಭೆಗೆ ಕರೆದಿದ್ದರು ಹೋಗಿದ್ದೆ ಅಷ್ಟೆ. ಅಲ್ಲಿ ಕ್ಯಾಮರಾ ಇರಲಿಲ್ಲ ಮಾತಾಡಿದ್ದೇನೆ. ಕ್ಯಾಮರಾ ಇದ್ದಿದ್ದರೆ ಮಾತಾಡುತ್ತಿರಲಿಲ್ಲ. ನಾವು ಹಿಂದುಳಿದವರು ಅಷ್ಟೆಲ್ಲ ಗಮನಿಸಿಲ್ಲ‌, ಯಾರೋ ಹಾಕಿರುತ್ತಾರೆ ಎಂದರು.

ಹೊರಗಿನಿಂದ ಬದವರಿಂದ ದೌರ್ಜನ್ಯ:ಬೆಂಗಳೂರಿನಲ್ಲಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಬಿ.ಕೆ ಹರಿಪಸ್ರಾದ್ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ರಾಜ್ಯದಲ್ಲಿ ಸರ್ಕಾರ ಬರಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಹರಿಪಸ್ರಾದ್ ಪ್ರಮುಖರು. ಪರಿಷತ್ ನ ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ ಹರಿಪಸ್ರಾದ್ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಈ ವಿಷಯವನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದೇನೆ. ಅವರು ಬೇರೆ ಪಕ್ಷದಿಂದ ಹಾರಿ ಬಂದವರಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲೇ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವವರು. ಜನಾರ್ದನ ಪೂಜಾರಿ, ಹೆಚ್.ಜಿ ರಾಮುಲು, ಜಾಲಪ್ಪ ಅವರನ್ನು ಮುಗಿಸಿದರು. ಈಗ ಹರಿಪಸ್ರಾದ್ ಧ್ವನಿ ಕುಗ್ಗಿಸುವ ಕೆಲಸ ಮಾಡುತ್ತಿದೆ. ನಮ್ಮ ಸಮುದಾಯವನ್ನು ತುಳಿಯುತ್ತಿದ್ದಾರೆ. 45 ವರ್ಷದ ರಾಜಕೀಯ ಅನುಭವ ಇರುವ ವ್ಯಕ್ತಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಇದರ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ ಮಾಡುತ್ತೇವೆ. ಸಮುದಾಯಕ್ಕೆ ನ್ಯಾಯ ಕೊಡಬೇಕು. ಹೈಕಮಾಂಡ್ ನಾಯಕರು ಇದನ್ನು ಗಮನಿಸಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರ ಯಾರೋ ಇಬ್ಬರಿಂದ ಅಧಿಕಾರಕ್ಕೆ ಬಂದಿಲ್ಲ. ಅನ್ನೋದನ್ನೂ ಕಾಂಗ್ರೆಸ್ ನೆನಪಿಟ್ಟುಕೊಳ್ಳಬೇಕು. ಎಲ್ಲ ಅಹರ್ತೆ ಇದ್ದ ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿ ಆಗುವ ವೇಳೆ ಪ್ರಮುಖ ಐದು ಷರತ್ತು ಇಟ್ಟು ಅವರನ್ನು ಕ್ಯಾಬಿನೆಟ್​ಗೆ ತೆಗೆದುಕೊಳ್ಳದೇ ದೂರ ಇಟ್ಟವರು ಇದನ್ನು ಗಮನಿಸಬೇಕು. ಹೊರಗಿನಿಂದ ಬಂದವರಿಂದಲೇ ಕಾಂಗ್ರೆಸ್ ಹಾಗೂ ಮೂಲ ಕಾಂಗ್ರೆಸ್ ಮೇಲೆ ದೌರ್ಜನ್ಯವಾಗುತ್ತಿದೆ. ಕಾಂಗ್ರೆಸ್‌ ಹೈ ಕಮಾಂಡ್ ಈ ಬಗ್ಗೆ ಗಮನಿಬೇಕು‌ ಎಂದು ಒತ್ತಾಯಿಸಿದರು.

ವಿಶೇಷ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ:ನಿನ್ನೆ ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ಈಡಿಗ ಬಿಲ್ಲವ ನಾಮಧಾರಿ ದೀವರ ಮಹಾಮಂಡಳಿ ವಿಶೇಷ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ . ರಾಜ್ಯದಲ್ಲಿ ಹಿಂದುಳಿದ ಜಾತಿಯ ನಮ್ಮ ವರ್ಗ ಮುಂದೆ ಬರುತ್ತಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಅವಕಾಶ ವಂಚಿತರಾಗುತ್ತಿರುವುದನ್ನು ನೋಡಿದರೆ ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದರು.

ಕೆಲವರು ಹೇಳಬಹುದು ಸಿದ್ದರಾಮಯ್ಯನವರೂ ಹಿಂದುಳಿದ ವರ್ಗದವರು. ನೀವೂ ಕೂಡ ಹಿಂದುಳಿದ ವರ್ಗದವರು.‌ ನೀವೆಲ್ಲಾ ಒಟ್ಟಿಗೆ ಸೇರಬೇಕು ಎಂದು ಹೇಳಬಹುದು. ಎಲ್ಲಾ ಒಟ್ಟಿಗೆ ಸೇರಿ 2013ರಲ್ಲಿ ಬೆಂಬಲ ಕೊಟ್ಟಿದ್ದೆವು. ನಾವು ಯಾವ ಮುಖ್ಯಮಂತ್ರಿಗಳ ಮುಂದೆನೂ ಕೈ ಚಾಚುವವರಲ್ಲ. ಸ್ವಾರ್ಥಕ್ಕಾಗಿ ನಮಗೋಸ್ಕರ ನಾವು ಇದುವರೆಗೆ ಕೇಳಿದವರಲ್ಲ. ಸಿದ್ದರಾಮಯ್ಯರಲ್ಲಿ ನಾನು ಉಡುಪಿಯ ಕಾರ್ಕಳದಲ್ಲಿ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಮಾಡಲು ಐದು ಕೋಟಿ ಕೊಡಿ ಎಂದು ಕೇಳಿದ್ದೆ. ಕೊಡ್ತೀನಿ ಅಂತ ಹೇಳಿದ್ರು. ಆದರೆ ಬಜೆಟ್​ನಲ್ಲಿ ಏನೂ ಕೊಟ್ಟಿಲ್ಲ. ರಾಜಕೀಯವಾಗಿ ಅವರು ನನಗೆ ಸಹಾಯ ಮಾಡಲು ಆಗುವುದಿಲ್ಲ, ನಾನೇ ಅವರಿಗೆ ರಾಜಕೀಯವಾಗಿ ಸಹಾಯ ಮಾಡಬಲ್ಲೆ ಎಂದು ಹೇಳಿದರು.

ಮಂಗಳೂರು ವಿವಿಯಲ್ಲಿ ಗುರುಪೀಠ ಸ್ಥಾಪನೆಯಾಗಬೇಕು ಎಂದು ಕೇಳಿದ್ದೆ. ಆದರೆ ಅದಕ್ಕೂ ಒಂದು ಪೈಸೆ ಕೊಟ್ಟಿಲ್ಲ. ಆದರೆ ಅವರು ಸಮಾಜಕ್ಕೆ ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ಸ್ವಾಮೀಜಿಗಳು ನೋಡಿ ಹೇಳಲಿ. ಹಿಂದುಳಿದ ಜಾತಿ ಅಂದರೆ ಒಂದೇ ಜಾತಿ ಅಲ್ಲ. ಅದಕ್ಕೆ ನಾವೆಲ್ಲಾ ಹಿಂದುಳಿದ ಜಾತಿಯಲ್ಲಿನ ಹಿಂದುಳಿದ ವರ್ಗದಲ್ಲಿ ಬರುವಂಥವರು. ಹಾಗಿದ್ದಾಗ ನಾವು ನಮ್ಮ‌ ಹಕ್ಕನ್ನು ಸಮಾನವಾಗಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಅದಕ್ಕೆ ಅವಕಾಶ ಆಗಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ನಮ್ಮ ಸಮುದಾಯದವರು ಅವಕಾಶ ವಂಚಿತರಾಗಬಾರದು;ಈ ಬಾರಿ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ನಮ್ಮ ಸಮುದಾಯದವರು ಅವಕಾಶ ವಂಚಿತರಾದರು. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಎರಡೂ ಕ್ಷೇತ್ರದಲ್ಲಿ ಟಿಕೆಟನ್ನು ಒಬ್ಬ ಮುಸ್ಲಿಂ ಹಾಗೂ ಒಬ್ಬ ಕ್ರಿಶ್ಚಿಯನ್​ಗೆ ಕೊಟ್ಟರು. ಹಾಗಂತ ನೀವು ಅಲ್ಪಸಂಖ್ಯಾತರ ವಿರುದ್ಧ ದನಿ ಎತ್ತಬಾರದು. ಏಕೆಂದರೆ ನಿಮ್ಮ ವಿರುದ್ಧ ಅವರನ್ನು ವ್ಯವಸ್ಥಿತವಾಗಿ ಎತ್ತಿ ಕಟ್ಟಿದ್ದಾರೆ. ಅಲ್ಪಸಂಖ್ಯಾತರನ್ನು ಮುಂದಿಟ್ಟಕೊಂಡು ನಾವು ಟಿಕೆಟ್ ವಂಚಿತರಾದೆವು. ಲಿಂಗಾಯತರಾಗಲಿ, ಒಕ್ಕಲಿಗರಾಗಲಿ, ಬ್ರಾಹ್ಮಣರಾಗಲಿ, ಕುರುಬರಾಗಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಮಾಡ್ತಾರೆ. ಅವರು ಏನಾದರು ಬರಬೇಕಾದರೆ ಅವರ ಸ್ಥಾನಗಳನ್ನು, ಸೀಟುಗಳನ್ನು ಬಿಟ್ಟುಕೊಡಲಿ ನಮ್ಮ ಸೀಟುಗಳನ್ನು ಏಕೆ ಬಿಟ್ಟು ಕೊಡಬೇಕು ಎಂದು ಅಸಮಾಧಾನ ಹೊರಹಾಕಿದರು.

ನಾವು ಯಾರಲ್ಲೂ ಭಿಕ್ಷೆ ಬೇಡಲ್ಲ:ನಾವು ಇರುವಂಥ ಸ್ಥಾನಗಳಲ್ಲಿ ನಮಗೆ ಬಿಟ್ಟು ಕೊಡಿ, ನೀವು ಇರುವಂಥ ಸೀಟುಗಳನ್ನು ಕೇಳುವುದಿಲ್ಲ. ನಾವೇನು ಮಂಡ್ಯ, ಹಾಸನ, ಬೆಳಗಾವಿಯಲ್ಲಿ ಈಡಿಗರು ಟಿಕೆಟ್ ಕೇಳುವುದಕ್ಕೆ ಆಗುತ್ತಾ?. ನಾನು ಮಂತ್ರಿಯಾಗುವುದು ಬೇರೆ ಪ್ರಶ್ನೆ. ನಾನು ಈಗಾಗಲೇ ದೇಶದಲ್ಲಿ ಐದು ರಾಜ್ಯಗಳಲ್ಲಿ ಮುಖ್ಯಮಂತ್ರಿ ಮಾಡುವಲ್ಲಿ ಪಾತ್ರವಹಿಸಿದ್ದೆ. ಮುಖ್ಯಮಂತ್ರಿ ಮಾಡುವುದು, ಇಳಿಸುವುದು ನನಗೆ ಚೆನ್ನಾಗಿ ಗೊತ್ತಿದೆ. ನಾವು ಯಾರಿಗೂ ಬಗ್ಗುವವರಲ್ಲ. ಯಾರಲ್ಲೂ ಭಿಕ್ಷೆಯೂ ಬೇಡಲ್ಲ ಎಂದು ಟಾಂಗ್ ನೀಡಿದರು.

ನಮಗೆ ಏನಾದ್ರು ಅನ್ಯಾಯ ಆದರೆ ಕೋಟಿ ಚೆನ್ನಯ್ಯನವರೇ ಹೇಳಿ ಕೊಟ್ಟಿದ್ದಾರೆ. ಎದೆ ಕೊಟ್ಟು ನಿಲ್ಲುತ್ತೇವೆ. ಬೆಂಗಳೂರಲ್ಲಿ 40 ವರ್ಷಗಳ ಕಾಲ ರಾಜಕಾರಣ ಮಾಡುವುದು ಅಂದರೆ ಸುಲಭ ಅಲ್ಲ. ನಮಗೆ ದೈರ್ಯ ಇಲ್ಲದಿದ್ದರೆ, ಯಾವತ್ತೋ ನಮ್ಮನ್ನು ಖಾಲಿ ಮಾಡಿಸುತ್ತಿದ್ದರು. ನಾನು ಯಾವತ್ತೂ ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ಅವರನ್ನು ಉಪಯೋಗಿಸಿಯೂ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಹಿಂದಿನ ಸರ್ಕಾರಗಳ ನಿರ್ಧಾರದಿಂದ ಭಾರತಕ್ಕೆ ನುಗ್ಗುತ್ತಿರುವ ನುಸುಳುಕೋರರು: ಶೋಭಾ ಕರಂದ್ಲಾಜೆ

Last Updated : Jul 22, 2023, 6:01 PM IST

ABOUT THE AUTHOR

...view details