ಬೆಂಗಳೂರು: ಹಿರಿಯ ನಟ, ಸಾಹಿತಿ, ವಿಚಾರವಾದಿ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಿಂದಾಗಿ ಇಂದು ಮಧ್ಯಾಹ್ನ ನಡೆಯಬೇಕಿದ್ದ ವಿಟಿಯು ಪರೀಕ್ಷೆಗಳನ್ನು ಆಡಳಿತ ಮಂಡಳಿ ಮುಂದೂಡಿದೆ.
ಗಿರೀಶ್ ಕಾರ್ನಾಡ್ ನಿಧನ ಹಿನ್ನೆಲೆ: ವಿಟಿಯು ಪರೀಕ್ಷೆಗಳು ಮುಂದೂಡಿಕೆ -
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ನಡೆಯಬೇಕಿದ್ದ ವಿಟಿಯು ಪರೀಕ್ಷೆಗಳನ್ನು ಹಿರಿಯ ನಟ, ಸಾಹಿತಿ ಗಿರೀಶ್ ಕಾರ್ನಾಡ್ ನಿಧನದ ಕಾರಣವಾಗಿ ಆಡಳಿತ ಮಂಡಳಿಯೂ ಮುಂದೂಡಿದೆ.

ವಿಟಿಯು ಪರೀಕ್ಷೆಗಳು ಮುಂದೂಡಿಕೆ.
ಇಂದು ಮಧ್ಯಾಹ್ನದ ನಂತರ ನಡೆಯಬೇಕಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡುವಂತೆ ವಿಟಿಯು ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮುಂದೆ ನಡೆಯುವ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಿದೆ.