ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ನಿರ್ಜೀವ ಅನ್ನೋದು ಸಾಬೀತು.. ಮಾಜಿ ವಿ ಎಸ್‌ ಉಗ್ರಪ್ಪ - ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ

ಮಂಗಳೂರು ಏರ್​ಪೋರ್ಟ್​ಗೆ ಭದ್ರತೆಯಿದೆ. ಅಲ್ಲಿ ಬಾಂಬ್ ಸಿಕ್ಕಿದೆ ಅಂದರೆ ಹೇಗೆ? ಭದ್ರತಾ ಸಿಬ್ಬಂದಿ ಮಣ್ಣು ತಿನ್ನುತ್ತಿದ್ರಾ? ಇದನ್ನ ನೋಡಿದರೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ಆಕ್ರೋಶ ಹೊರ ಹಾಕಿದರು.

V.S ugrappa Press Meet
ರಾಜ್ಯ ಸರ್ಕಾರ ನಿರ್ಜೀವವಾಗಿದೆ ಎನ್ನುವುದು ಸಾಬೀತಾಗಿದೆ: ಉಗ್ರಪ್ಪ

By

Published : Jan 21, 2020, 4:14 PM IST

ಬೆಂಗಳೂರು: ಮಂಗಳೂರಲ್ಲಿ ಬಾಂಬ್ ಇಟ್ಟ ಪ್ರಕರಣದಿಂದಾಗಿ ರಾಜ್ಯ ಸರ್ಕಾರ ನಿರ್ಜೀವವಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ನಿರ್ಜೀವವಾಗಿದೆ ಅನ್ನೋದು ಸಾಬೀತು.. ಮಾಜಿ ಸಂಸದ ಉಗ್ರಪ್ಪ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಹದಗೆಡುವ ಲಕ್ಷಣಗಳು ಗೋಚರಿಸ್ತಿವೆ. ಹಿಂದೂ ಪರ ಸಂಘಟನೆ ಕಾರ್ಯಕರ್ತರ ಹತ್ಯೆ ಸಂಚು ನಡೆದಿದೆ ಎಂದು ಪೊಲೀಸ್ ಆಯುಕ್ತರೇ ಈ ಬಗ್ಗೆ ಹೇಳಿದ್ದಾರೆ. ಕೆಂಗೇರಿ ಬಳಿ ಚರ್ಚ್ ಮೇಲೆ ನಿನ್ನೆ ರಾತ್ರಿ ದಾಳಿ ಆಗಿದೆ. ಚರ್ಚ್​ನಲ್ಲಿರುವ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮಂಗಳೂರಿನಲ್ಲಿ ಸಜೀವ ಬಾಂಬ್ ಸಿಕ್ಕಿದೆ. ಇದನ್ನ ನೋಡಿದ್ರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ಯಾ? ಇದನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಗುಪ್ತಚರ ವರದಿಯ ಪ್ರಕಾರ ಸರ್ಕಾರ ನಿರ್ಜೀವವಾಗಿದೆ ಎಂದರು.

ಮಂಗಳೂರು ಏರ್​ಪೋರ್ಟ್​ಗೆ ಭದ್ರತೆಯಿದೆ. ಅಲ್ಲಿ ಬಾಂಬ್ ಸಿಕ್ಕಿದೆ ಅಂದರೆ ಹೇಗೆ? ಭದ್ರತಾ ಸಿಬ್ಬಂದಿ ಮಣ್ಣು ತಿನ್ನುತ್ತಿದ್ರಾ? ಇದನ್ನ ನೋಡಿದರೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಉಗ್ರಪ್ಪ ಆಕ್ರೋಶ ಹೊರಹಾಕಿದರು.

ಗೃಹ ಸಚಿವ ಬೊಮ್ಮಾಯಿ ಸಂಪೂರ್ಣ ವಿಫಲರಾಗಿದ್ದಾರೆ. ಮಸೀದಿಗಳಲ್ಲಿ ವೆಪನ್ಸ್ ಇವೆ ಅಂತಾ ರೇಣುಕಾಚಾರ್ಯ ಹೇಳಿದ್ದಾರೆ. ಅಲ್ಲದೆ ಅಲ್ಪಸಂಖ್ಯಾತರ ನೆರವನ್ನ ಇನ್ನೊಂದು ಇಲಾಖೆಗೆ ಕೊಡ್ತೇವೆ ಅಂತಾರೆ. ನಮ್ಮ ಸಂವಿಧಾನದಲ್ಲಿ ಇಂತಹ ಉಲ್ಲೇಖವಿದೆಯೇ? ಧರ್ಮಾಧಾರಿತ ರಾಜಕಾರಣ ಮಾಡ್ತಿರೋದು ಸರಿಯೇ? ಮಸೀದಿಗಳಲ್ಲಿ ಆಯುಧಗಳಿದ್ದರೆ ಕೇಸ್‌ ಯಾಕೆ ಹಾಕಿಲ್ಲ?ಆರ್​ಎಸ್​ಎಸ್​ ಕಚೇರಿಯಲ್ಲಿ ದಂಡ ಬಳಸುತ್ತಾರೆ. ಹಾಗಂತ ಸಮಾಜದ ಮೇಲಿನ ದಾಳಿಗೆ ಬಳಸ್ತಾರೆ ಅಂತಾ ಹೇಳೋಕೆ ಆಗುತ್ತಾ? ಬಿಜೆಪಿಯವರು ಸಮಾಜ ಒಡೆದು ಆಳುವ ಕೆಲಸ ಮಾಡ್ತಿದ್ದಾರೆ. ರೇಣುಕಾಚಾರ್ಯ ಹೇಳಿಕೆ ಸಿಎಂ ಅವರ ಹೇಳಿಕೆಯೂ ಆಗುತ್ತೆ. ಯಾಕಂದ್ರೆ, ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಎಂದರು.

ಚುನಾವಣಾ ಆಯೋಗ ಗಮನಿಸಲಿ ಬಸನಗೌಡ ಯತ್ನಾಳ್ ಬಹಿರಂಗ ಹೇಳಿಕೆ ನೀಡ್ತಾರೆ. ನನ್ನನ್ನ ಸೋಲಿಸುವ ಪ್ರಯತ್ನ ನಡೆದಿತ್ತು. ನಾನು ಹಣ ಚೆಲ್ಲಿ ಗೆದ್ದು ಬಂದಿದ್ದೇನೆ ಅಂತಾರೆ. ಯತ್ನಾಳ್ ಹೇಳಿಕೆ ಕೂಡ ಅಪರಾಧವಾಗುತ್ತದೆ. ಚುನಾವಣಾ ಆಯೋಗ ಬಲಿಷ್ಠವಾಗಿದೆಯೇ? ಬಲಿಷ್ಠವಾಗಿದ್ದರೆ ಸುಮೊಟೋ ಕೇಸ್ ದಾಖಲಿಸಬೇಕಿತ್ತು. ಇದೇ ರೀತಿ ಹೊಸಕೋಟೆ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ಕೂಡ ಹಣ ಹಂಚಿದರೂ ಸೋತೆ ಎಂದು ಹೇಳಿಕೊಂಡಿದ್ದಾರೆ. ಇದನ್ನೆಲ್ಲಾ ಚುನಾವಣಾ ಆಯೋಗ ಗಮನಿಸಬೇಕಿದೆ ಎಂದು ಹೇಳಿದರು.

ABOUT THE AUTHOR

...view details