ಕರ್ನಾಟಕ

karnataka

ETV Bharat / state

ಪ್ರವಾಹದ ಚರ್ಚೆಗೆ ಅವಕಾಶ ಕೋರಿದರೂ ಡೋಂಟ್​ಕೇರ್​... ಸರ್ಕಾರದ ವಿರುದ್ಧ ಉಗ್ರಾವತಾರ ತಾಳಿದ ಉಗ್ರಪ್ಪ - Benagluru news

ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಭೇಟಿಗೆ ಅವಕಾಶ ಕೋರಿ ಪತ್ರ ಬರೆದಿದ್ದರೂ, ಪ್ರಧಾನಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ವಪಕ್ಷ ಸಭೆ ಕರೆಯಲು ಮನವಿ ಮಾಡಿದ್ದರೂ ರಾಜ್ಯ ಸರ್ಕಾರ ಕ್ಯಾರೆ ಅಂದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ.

ಸರ್ಕಾರದ ವಿರುದ್ಧ ಉಗ್ರಪ್ಪ ಕಿಡಿ

By

Published : Sep 6, 2019, 8:41 PM IST

ಬೆಂಗಳೂರು : ರಾಜ್ಯದ ಪ್ರವಾಹ ನೆರವಿನ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಕೋರಿದ್ದರೂ ಪ್ರಧಾನಿ ಕಚೇರಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ಮೋದಿ ಅವರನ್ನು ಭೇಟಿಯಾಗಲು ನಾವು ಪತ್ರ ಬರೆದಿದ್ದೆವು. ಆದರೆ, ಆ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಯಾವುದೇ ಉತ್ತರ ಬಂದಿಲ್ಲ. ಇನ್ನು ಸರ್ವ ಪಕ್ಷ ಸಭೆ ಕರೆಯುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದೆವು, ಆದರೆ, ಸರ್ಕಾರವೂ ಕ್ಯಾರೇ ಅಂದಿಲ್ಲ. ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ನಷ್ಟವಾಗಿದೆ. 5 ಸಾವಿರ ಕೋಟಿ ರೂ. ತಕ್ಷಣ ಪರಿಹಾರಕ್ಕೆ ಒತ್ತಡ ಹಾಕಿದ್ದರೂ, ಕೇಂದ್ರದಿಂದ ಇನ್ನೂ ನೆರವು ಬಂದಿಲ್ಲ. ಇದೇನಾ ಪ್ರವಾಹ ಸಂತ್ರಸ್ತರ ಬಗೆಗಿನ ಧೋರಣೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರದ ವಿರುದ್ಧ ಉಗ್ರಪ್ಪ ಕಿಡಿ

ಇಸ್ರೋ ಚಂದ್ರ ಗ್ರಹಕ್ಕೆ ವಿಕ್ರಂ ಲ್ಯಾಂಡರ್ ಕಳುಹಿಸಿದ್ದು, ನಾಳೆ ಬೆಳಗಿನ ಜಾವ ಆ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಇದನ್ನು ನೋಡಲು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದು ದೇಶಕ್ಕೆ ವಿಶ್ವಮಟ್ಟದಲ್ಲಿ ಗರಿ ಮೂಡಿಸುತ್ತಿದೆ, ನಾವು ಅಭಿನಂದನೆ ಸಲ್ಲಿಸುತ್ತೇವೆ. ಪ್ರಧಾನಿ ಜೊತೆ ಚಂದ್ರನ ಮೇಲಿನ ಕೌತುಕ ವೀಕ್ಷಿಸಲು ರಾಯಚೂರಿನ ವಿದ್ಯಾರ್ಥಿಗೆ ಅವಕಾಶ ಸಿಕ್ಕಿರುವುದು ಅಭಿನಂದನೀಯ ಎಂದರು.

ನೀಲಿ ಚಿತ್ರ ನೋಡಿದವರಿಗೆ ಡಿಸಿಎಂ ಪಟ್ಟ ಉಗ್ರಪ್ಪ ಕಿಡಿ..

ಸದನದಲ್ಲಿ ನೀಲಿ ಚಿತ್ರ ನೋಡಿದ ಲಕ್ಷ್ಮಣ ಸವದಿಯವರಿಗೆ ಡಿಸಿಎಂ ಪಟ್ಟ, ಸಿಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಖಂಡನೀಯ. ಲಕ್ಷ್ಮಣ ಸವದಿ, ಕೃಷ್ಣಾ ಪಾಲೇಮಾರ್, ಸಿಸಿ ಪಾಟೀಲ್ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸದನದಲ್ಲೇ ನೀಲಿ ಚಿತ್ರ ನೋಡಿದ್ದರು, ಆದರೂ ಈ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಇಂತಹವರನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಅವರು ನೀಲಿಚಿತ್ರ ನೋಡಿರುವುದು ಅಪರಾಧವಲ್ಲ ಎಂದಿದ್ದಾರೆ. ಹಾಗಾದರೆ, ಅಂದು ಅವರ ರಾಜೀನಾಮೆ ಯಾಕೆ ಪಡೆದಿದ್ದು, ಹೋಗಲಿ ನೀಲಿ ಚಿತ್ರ ನಿಮಗೆ ಅಪರಾಧವಲ್ಲ ಎಂದರೆ ನೀಲಿ ಚಿತ್ರಗಳನ್ನು ವಿಧಾನಸೌಧದ ಕಾರಿಡಾರ್ ನಲ್ಲಿ ಯಾವಾಗ ತೋರಿಸ್ತೀರಾ, ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ನೀಲಿ ಚಿತ್ರ ನೋಡುವುದು ಅಸಂಸ್ಕೃತಿಯಲ್ಲ. ಮನೆ ಮನೆಗೆ ಮದ್ಯ ಸರಬರಾಜು ಮಾಡುವುದು ಅವರಿಗೆ ತಪ್ಪಲ್ಲ. ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿಯವರ ಧೋರಣೆ ಏನು. ಕಾನೂನು ಸಂಸದೀಯ ಸಚಿವರೇ ನೀಲಿ ಚಿತ್ರದ ಬಗ್ಗೆ ಹೇಳಿದ್ದಾರೆ. ಮುಂದೆ ಬಸ್, ರೈಲ್ವೆ ನಿಲ್ದಾಣ ಮತ್ತಿತರ ಕಡೆ ತೋರಿಸಿದ್ರು ಅಚ್ಚರಿಯಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಗರಂ ಆದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದರು. ಈಗ ಅಲ್ಲೊಬ್ಬರು, ಇಲ್ಲೊಬ್ಬರು ಧ್ವನಿ ಎತ್ತುತ್ತಿದ್ದಾರೆ. ಸ್ವಾಭಿಮಾನ ಇರುವವರು ರಾಜೀನಾಮೆ ಕೊಟ್ಟು ಹೊರ ಬಂದಿದ್ದಾರೆ ಎಂದು ಹೇಳಿದರು.

ABOUT THE AUTHOR

...view details