ಕರ್ನಾಟಕ

karnataka

ETV Bharat / state

ಮತ ಮಾರಿಕೊಳ್ಳಬೇಡಿ: ಸಂತೋಷ್ ಹೆಗ್ಡೆ ಭಾವಚಿತ್ರ ಹಿಡಿದು ಮತದಾರರಿಗೆ ಜಾಗೃತಿ - Voting awareness with Santosh Hegde's portrait in K R Puram Assembly constituency

ಕೆ. ಆರ್‌. ಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರೊಬ್ಬರು ಸೇವ್ ಡೆಮಾಕ್ರಸಿ ಮತ ಮಾರಿಕೊಳ್ಳದಂತೆ ಸಂತೋಷ್ ಹೆಗ್ಡೆ ಭಾವಚಿತ್ರ ಹಿಡಿದು ಮತದಾರರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

voting-awareness
ಸಂತೋಷ್ ಹೆಗ್ಡೆ ಭಾವಚಿತ್ರ ಹಿಡಿದು ಮತದಾರರಿಗೆ ಜಾಗೃತಿ

By

Published : Dec 5, 2019, 1:29 PM IST

ಬೆಂಗಳೂರು: ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಎಲ್ಲೆಡೆ ಮತದಾನ ನಡೆಯುತ್ತಿದೆ. ಬೆಳಗ್ಗೆ ಏಳರಿಂದ 11 ಗಂಟೆವರೆಗೆ ಶೇ. 6.15 ರಷ್ಟು ಮತದಾನವಾಗಿದ್ದು, ಈವರೆಗೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂತೋಷ್ ಹೆಗ್ಡೆ ಭಾವಚಿತ್ರ ಹಿಡಿದು ಮತದಾರರಿಗೆ ಜಾಗೃತಿ

ಕ್ಷೇತ್ರದ ಮತದಾರ ಸಂತೋಷ್ ಎಂಬುವರು ವಿಶಿಷ್ಟವಾಗಿ ಮತದಾನ ಮಾಡಿದ್ದಲ್ಲದೇ, ಸೇವ್ ಡೆಮಾಕ್ರಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಭಾವಚಿತ್ರ ಹಿಡಿದು, 'ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ, ಸೇವ್​ ಡೆಮಾಕ್ರಸಿ' ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದರು.

ಇನ್ನು, ಮತಗಟ್ಟೆಗಳಿಗೆ ದೌಡಾಯಿಸುತ್ತಿರುವ ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ‌ ಮತ ಹಾಕಿ ಹಕ್ಕು ಪ್ರದರ್ಶಿಸಿದರು. ಇನ್ನು, ಇದೇ ವೇಳೆ, ಕಲ್ಕೆರೆಯ ನಮ್ಮೂರ ಸರ್ಕಾರಿ ಹಿರಿಯ ಪ್ರಾಥ‌ಮಿಕ ಶಾಲೆಯ ಮತಗಟ್ಟೆ ಬಳಿ ದಂಪತಿ ಮತದಾನ ಮಾಡಿ ತೋರು ಬೆರಳಿಗೆ ಹಾಕಿರುವ ಶಾಯಿಯನ್ನು ತೋರುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಗಮನ ಸೆಳೆದರು.

For All Latest Updates

TAGGED:

ABOUT THE AUTHOR

...view details