ಬೆಂಗಳೂರು:ರಾಜ್ಯದಲ್ಲಿ ಉಪಚುನಾವಣೆ ಭರಾಟೆ ಜೋರಾಗಿದ್ದು, ಪ್ರಮುಖ ಪಕ್ಷಗಳ ಪ್ರಚಾರದಲ್ಲಿ ತೊಡಗಿದ್ರೆ ಬೆಂಗಳೂರಿನಲ್ಲಿ ಬಿಬಿಎಂಪಿ ನಗರವಾಸಿಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ವಾಕಥಾನ್ ನಡೆಸಿದ್ದಾರೆ.
ಬಿಬಿಎಂಪಿ ಜೊತೆ ಸೇರಿ ಮೌಂಟ್ ಕಾರ್ಮೆಲ್ ವಿದ್ಯಾರ್ಥಿಗಳಿಂದ ವಾಕಥಾನ್ ಶಿವಾಜಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಚುನಾವಣಾ ಆಯೋಗದ ಸಹಕಾರದೊಂದಿಗೆ ಮೌಂಟ್ ಕಾರ್ಮೆಲ್ ಕಾಲೇಜಿನ ಸುಮಾರು 800 ವಿದ್ಯಾರ್ಥಿನಿಯರು, ಕನ್ನಿಂಗ್ ಹ್ಯಾಮ್ ರೋಡ್, ವಸಂತ ನಗರ ಚರ್ಚ್ ಸ್ಟ್ರೀಟ್, ಶಿವಾಜಿನಗರ ಸೇರಿದಂತೆ ಸುಮಾರು 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮತದಾನ ನಮ್ಮ ಹಕ್ಕು ಎಂಬ ಘೋಷಣೆಗಳೊಂದಿಗೆ ಜಾಥ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು.
ಇನ್ನೂ ವಾಕಥಾನ್ ಕುರಿತು ಮಾತನಾಡಿದ ಬಿಬಿಎಂಪಿ ಪೂರ್ವ ವಿಭಾಗದ ಉಪ ಆಯುಕ್ತರಾದ ರಾಜು ನೀಲಯ್ಯ, ಈಗಾಗಲೇ ಉಪ ಚುನಾವಣೆ ಘೋಷಣೆಯಾಗಿದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಕ್ಷೇತ್ರಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಾಕಥಾನ್ ನಡೆಸಿದ್ದೇವೆ. ಅಲ್ಲದೆ ಶಾಲಕಾಲೇಜುಗಳಲ್ಲಿ ಇವಿಎಂ ಮೆಷಿನ್ಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ .ಅಲ್ಲಸೆ ಮೆಟ್ರೋ ಸ್ಟೇಷನ್, ಮಾಲ್ಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಲ್ಲದೆ ಈ ವಾಕಥಾನ್ ನಡೆಸಿದ ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ತುಂಬಾ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಜಾಸ್ತಿ ಆಗಬೇಕು ಎಂಬ ಉದ್ದೇಶದಿಂದ ಇಂದು ನಾವು ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಜಾಗೃತಿ ವಾಕಥಾನ್ ನಡೆಸಿದ್ದೇವೆ ಎಂದು ಹೇಳಿದರು.