ಕರ್ನಾಟಕ

karnataka

ETV Bharat / state

ಆರ್.ಆರ್.ನಗರ ಮತದಾನ.. ಅನಾರೋಗ್ಯ ಸಮಸ್ಯೆ ಇದ್ದರೂ ಮತಗಟ್ಟೆಗೆ ಬಂದ ಮತದಾರರು.. - R. R. Nagar by-election

ಮತದಾನ ಮಾಡುವುದು ನಮ್ಮ ಹಕ್ಕು, ನಮ್ಮ ಹಕ್ಕನ್ನ ಚಲಾಯಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು. ಎಲ್ಲರೂ ಮತದಾನದ ಹಬ್ಬದಲ್ಲಿ ಭಾಗಿಯಾಗಿ, ಇದು ಕೇವಲ 10 ನಿಮಿಷದ ಕೆಲಸ ಅಷ್ಟೇ ಎಂದು ಹಿರಿಯ ನಾಗರಿಕರೊಬ್ಬರು ಜಾಗೃತಿ ಮೂಡಿಸಿದ್ದಾರೆ..

Voters who arrived by-election among illnesses at bengalore
ಮತದಾರರು

By

Published : Nov 3, 2020, 6:11 PM IST

ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅನಾರೋಗ್ಯ ಸಮಸ್ಯೆಗಳು ಇದ್ದರೂ ಮತ ವ್ಯರ್ಥ ಮಾಡದೇ ಸಾರ್ವಜನಿಕರು ತಮ್ಮ ಹಕ್ಕನ್ನು ಚಲಾಯಿಸಿ ಬರುತ್ತಿದ್ದ ದೃಶ್ಯ ಕಂಡು ಬಂತು. ಮಹಿಳೆಯೊಬ್ಬರು ತಮ್ಮ ಕಾಲಿಗೆ ದೊಡ್ಡ ಗಾಯವಾಗಿದ್ದರೂ, ಯಾರ ಸಹಾಯವನ್ನೂ ಪಡೆಯದೆ ಸ್ವತಃ ತಾವೇ ಕುಂಟುತ್ತ ಬಂದು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು.

ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದ ಹಿರಿಯರು
ಅಪ್ಪನ ಮತದಾನಕ್ಕೆ ಮಗನ ಸಾಥ್- ಪಂಚೆ ಉಟ್ಟುಕೊಂಡು ಬಂದ ಬಾಲಕ
ಮತದಾನವನ್ನು ಹಬ್ಬವನ್ನಾಗಿ ಆಚರಿಸಿ ಎಂದು ಸಾಕಷ್ಟು ಸಲ ಜಾಗೃತಿ ಮೂಡಿಸಿದ ಫಲವಾಗಿ ಜ್ಞಾನಭಾರತಿ ವಾರ್ಡ್‌ನ ಜ್ಞಾನ ಜ್ಯೋತಿ ನಗರದ ಹೆಚ್ ಎಂ ಆರ್ ಇಂಟರ್​ ನ್ಯಾಷನಲ್​​ ಸ್ಕೂಲ್ ಬಳಿ, ಅಪ್ಪನ-ಅಜ್ಜಿಯ ಮತದಾನಕ್ಕೆ ಮಗ ಸಾಥ್ ಕೊಟ್ಟಿದ್ದಾರೆ. ‌ಅದು ಕೂಡ ಪಂಚೆ ಧರಿಸಿ ಸಾಂಪ್ರದಾಯಿಕವಾಗಿ ಬಂದ ನಾಲ್ಕು ವರ್ಷದ ಬಾಲಕ ಎಲ್ಲರ ಗಮನ‌ಸೆಳೆದ.
ಎಲ್ಲರೂ ಬಂದು ಮತದಾನ ಮಾಡಿ ಕೊರೊನಾ ಭಯ ಬೇಡ: ಹಿರಿಯ ನಾಗರಿಕರ ಕರೆ
ಕೊರೊನಾ ಅಂತ ಭಯ ಪಟ್ಟು ಮನೆಯೊಳಗೆ ಇರಬೇಡಿ. ಮತಗಟ್ಟೆಗೆ ಬಂದು ಮತದಾನ ಮಾಡಿ ಅಂತ ಹಿರಿಯ ನಾಗರಿಕರೊಬ್ಬರು ಕರೆ ನೀಡಿದರು. ಮತದಾನ ಮಾಡುವುದು ನಮ್ಮ ಹಕ್ಕು, ನಮ್ಮ ಹಕ್ಕನ್ನ ಚಲಾಯಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು. ಎಲ್ಲರೂ ಮತದಾನದ ಹಬ್ಬದಲ್ಲಿ ಭಾಗಿಯಾಗಿ, ಇದು ಕೇವಲ 10 ನಿಮಿಷದ ಕೆಲಸ ಅಷ್ಟೇ ಅಂತ ಜಾಗೃತಿ ‌ಮೂಡಿಸಿದರು.

ABOUT THE AUTHOR

...view details