ಕರ್ನಾಟಕ

karnataka

By

Published : Dec 2, 2022, 1:51 PM IST

ETV Bharat / state

ಮತದಾರರ ಹೆಸರು ಡಿಲಿಟ್ ಪ್ರಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ಡಿಜಿಟಲ್ ಅಭಿಯಾನ

ರಾಜ್ಯ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ 'ಡಿಲಿಟ್ ಬಿಜೆಪಿ ನಾಟ್ ವೋಟರ್ ಐಡಿ' ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಡಿಜಿಟಲ್ ಅಭಿಯಾನ ಆರಂಭಿಸಿದೆ.

State Congress digital campaign against BJP
ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಡಿಜಿಟಲ್ ಅಭಿಯಾನ

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಬೆಂಗಳೂರು ಮತದಾರರ ದತ್ತಾಂಶ ಕಳ್ಳತನ ಹಾಗೂ ಡಿಲಿಟ್​ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ 'ಡಿಲಿಟ್ ಬಿಜೆಪಿ ನಾಟ್ ವೋಟರ್ ಐಡಿ' ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಡಿಜಿಟಲ್ ಅಭಿಯಾನ ಆರಂಭಿಸಿದೆ.

ಕರ್ನಾಟಕದ ಬಿಜೆಪಿ ಸರ್ಕಾರದ ವೋಟರ್ ಐಡಿ ಡೇಟಾ ಕಳ್ಳತನ ಇತ್ತೀಚೆಗೆ ಬಹಿರಂಗಗೊಂಡಿದ್ದು, ಚುನಾವಣಾ ಆಯೋಗ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ 6.6 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಂದಾಜಿಸಲಾಗಿದ್ದರೂ, ಮತದಾರರ ಪಟ್ಟಿಯಲ್ಲಿ ತಮ್ಮ ನೋಂದಣಿಯನ್ನು ಟೋಲ್ ಫ್ರೀ ಸಂಖ್ಯೆ ಮತ್ತು ವೆಬ್‌ಸೈಟ್‌ನೊಂದಿಗೆ ಪರಿಶೀಲಿಸಲು ಈಗಾಗಲೇ ಇಸಿಐ ಮತದಾರರಿಗೆ ವಿನಂತಿಸಿದೆ.

ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಡಿಜಿಟಲ್ ಅಭಿಯಾನ

ಇತ್ತ ಬಿಜೆಪಿ ಸರ್ಕಾರ ದೇಶದ ಪ್ರಜಾಪ್ರಭುತ್ವವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದು, ಮತದಾರರ ಪಟ್ಟಿಯನ್ನು ಪರಿಶೀಲಿಸಲು ಜಾಗೃತಿ ಮೂಡಿಸಲು ಕಾಂಗ್ರೆಸ್ ವಾಟ್ಸಾಪ್ ಮೂಲಕ ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಲಿದೆ ಎಂದು ಕಾಂಗ್ರೆಸ್​ ಅಭಿಯಾನದಲ್ಲಿ ಜನರಿಗೆ ಮಾಹಿತಿ ನೀಡಿದೆ.

ಬಿಜೆಪಿಯ ರಾಜಕೀಯ ವಿಧಾನದ ಬಗ್ಗೆ ಜಾಗೃತರಾಗಿರಿ. ನಿಮ್ಮ ಗುರುತಿನ ಚೀಟಿಯನ್ನು ಹೀಗೆ ಮಾಡುವ ಬಿಜೆಪಿ ನಿಮಗೆ ಏನು ಮಾಡಬಹುದು?. ಒಂದು ವೇಳೆ ನಿಮ್ಮ ಹೆಸರು ಡಿಲಿಟ್​ ಆಗಿದ್ದರೆ, ಬದಲಾಗಿದ್ದರೆ ಕೂಡಲೇ ಆಕ್ಷೇಪಿಸಿ. ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಪಾಸಣೆ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಸಾರ್ವಜನಿಕ ಸಂದೇಶ ಹೊರಡಿಸಿದೆ.

ಇದನ್ನೂ ಓದಿ:ನಮ್ಮ ಮನವಿಯನ್ನು ಚುನಾವಣಾ ಆಯೋಗ ಅಂಗೀಕರಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ: ಡಿಕೆಶಿ

ABOUT THE AUTHOR

...view details