ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಯುತ್ತದೆಯೋ, ವಿಳಂಬವಾಗುತ್ತದೆಯೋ ಎಂಬ ಗೊಂದಲದ ನಡುವೆಯೇ ಪೂರ್ವ ಸಿದ್ಧತೆಗಳು ಸದ್ದಿಲ್ಲದೆ ಪೂರ್ಣಗೊಂಡಿವೆ. 198 ವಾರ್ಡ್ಗಳಲ್ಲಿ 81,31,723 ಮತದಾರರಿದ್ದಾರೆ ಎಂದು ಮತದಾರರ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಿದೆ.
2011ರ ಜನಗಣತಿ ಪ್ರಕಾರ, ವಾರ್ಡ್ಗಳನ್ನು 198 ರಿಂದ 243ಕ್ಕೆ ಮರುವಿಂಗಡಣೆ ಮಾಡಿ 2020ರ ಮಾರ್ಚ್ 2 ರಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. ಮರು ವಿಂಗಡನೆಗೊಂಡ ವಾರ್ಡ್ಗಳಿಗೆ ಅನುಗುಣವಾಗಿ ಬಿಬಿಎಂಪಿ ಸಾರ್ವತ್ರಿಕ ಚುನಾವಣೆ 2020ಅನ್ನು ನಡೆಸಲು ಮತದಾರರ ಪಟ್ಟಿಯನ್ನು ನ.30 ರೊಳಗೆ ಮಾಡಲು ರಾಜ್ಯ ಚುನಾವಣಾ ಆಯೋಗ ಗಡುವು ನೀಡಿತ್ತು.
ಇದೀಗ 198 ವಾರ್ಡ್ಗಳಲ್ಲಿ 81,31,723 ಮತದಾರರಿದ್ದಾರೆ ಎಂದು ಅಂತಿಮ ಪಟ್ಟಿ ಸಿದ್ಧವಾಗಿದ್ದು, ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. ಆಯಾ ವಾರ್ಡ್ನ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿ, ಬಿಬಿಎಂಪಿ ವೆಬ್ಸೈಟ್ನಲ್ಲಿ ಈ ಪಟ್ಟಿ ಲಭ್ಯವಿದೆ. ಪಾಲಿಕೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇರುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಗ್ರಾ.ಪಂ. ಚುನಾವಣೆಯಲ್ಲಿ ಶೇ.70ರಷ್ಟು ಗೆಲುವು ನಮ್ಮದೇ: ಸಲೀಂ ಅಹಮದ್ ವಿಶ್ವಾಸ
ಆದ್ರೆ ಬಿಬಿಎಂಪಿ ಚುನಾವಣೆಯನ್ನು 243 ವಾರ್ಡ್ಗಳಿಗೆ ನಡೆಸಬೇಕಾಗಿ ಬಂದರೆ, ಹೊಸ ಪ್ರದೇಶಗಳು ಪಾಲಿಕೆ ವ್ಯಾಪ್ತಿಗೆ ಬಂದರೆ, ಮತದಾರರ ಪಟ್ಟಿಯನ್ನು ಮತ್ತೆ ಹೊಸದಾಗಿ ಸಿದ್ಧಪಡಿಸಬೇಕಾಗುತ್ತದೆ. 2015ಕ್ಕೆ ಹೋಲಿಸಿದರೆ ಮತದಾರರ ಸಂಖ್ಯೆ ಈ ಬಾರಿ 8,03,145 ಹೆಚ್ಚಳವಾಗಿದೆ.