ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು ಮೈಕ್ರೋಲ್ಯಾಬ್ಸ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ ಅಂಧತ್ವ ನಿಮೂರ್ಲನೆ ಉದ್ದೇಶ ಹೊಂದಿರುವ ಜಾಗತಿಕ ಉಪಕ್ರಮವಾದ ‘ವಿಷನ್ 2020’ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.
'ವಿಷನ್ 2020' ವಿಶೇಷ ಅಂಚೆ ಲಕೋಟೆ ಬಿಡುಗಡೆ - vision-2020 launched news
ಭಾರತೀಯ ಅಂಚೆ ಇಲಾಖೆಯು ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ ಅಂಧತ್ವ ನಿಮೂರ್ಲನೆ ಉದ್ದೇಶದಿಂದ ‘ವಿಷನ್ 2020’ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.
!['ವಿಷನ್ 2020' ವಿಶೇಷ ಅಂಚೆ ಲಕೋಟೆ ಬಿಡುಗಡೆ vision-2020 launched in bengaluru](https://etvbharatimages.akamaized.net/etvbharat/prod-images/768-512-8951601-683-8951601-1601133029344.jpg)
ವಿಶೇಷ ಅಂಚೆ ಲಕೋಟೆ ಬಿಡುಗಡೆ
ನಗರದ ಪ್ರಧಾನ ಅಂಚೆ ಇಲಾಖೆಯ ಮೇಘದೂತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಈ ವಿಶೇಷ ಅಂಚೆ ಲಕೋಟೆಯು ಬೆಂಗಳೂರಿನ ಅಂಚೆ ಮಹಾ ಕಾರ್ಯಾಲಯ, ಮಂಗಳೂರು, ಮೈಸೂರು, ಬೆಳಗಾವಿ ಮುಖ್ಯ ಅಂಚೆ ಕಚೇರಿಗಳು ಮತ್ತು ಇ-ಪೋಸ್ಟ್ ಆಫೀಸ್ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಎಸ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ವಿಶೇಷ ಅಂಚೆ ಲಕೋಟೆ ಬಿಡುಗಡೆ