ಕರ್ನಾಟಕ

karnataka

ETV Bharat / state

ಲೋಕಾಯುಕ್ತಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ವಿಶ್ವನಾಥ್ ಶೆಟ್ಟಿ ಮನವಿ - Vishwanath Shetty request

ಲೋಕಾಯುಕ್ತಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ  ಸರ್ಕಾರಕ್ಕೆ ‌ಮನವಿ ಮಾಡಿದ್ದಾರೆ.

Vishwanath Shetty
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ

By

Published : Jan 27, 2020, 11:21 AM IST

ಬೆಂಗಳೂರು: ಹಲ್ಲಿಲ್ಲದ ಹಾವಿನಂತಾಗಿರುವ ಲೋಕಾಯುಕ್ತಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ, ಸರ್ಕಾರಕ್ಕೆ ‌ಮನವಿ ಮಾಡಿದ್ದಾರೆ.

ಈಗಿರುವ ಸಿಬ್ಬಂದಿ ಎಲ್ಲಾ ಕೆಲಸವನ್ನ ಮಾಡಲು ಸಾಧ್ಯವಿಲ್ಲ. ಈಗಾಗಲೇ ಕೆಲ ರಾಜಕಾರಣಿಗಳು ತಮ್ಮ ಆಸ್ತಿ ವಿವರವನ್ನ ಲೊಕಾಯುಕ್ತಕ್ಕೆ ನೀಡಿದ್ದಾರೆ. ಇದನ್ನ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ಸಿಬ್ಬಂದಿ ಕೊರತೆ ಇದೆ. ಹಾಗೆಯೇ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಕೆಟಗರಿಯಲ್ಲಿ ಸಿಬ್ಬಂದಿಯೇ ಇಲ್ಲ. ಅಲ್ಲದೆ ಮುಖ್ಯವಾಗಿ ಅಡಿಷನಲ್ ರಿಜಿಸ್ಟ್ರಾರ್​ ಹುದ್ದೆಯೂ ಹಾಗೆಯೇ ಇದ್ದು, ಇದಕ್ಕೆ ತಕ್ಕಂತೆ ಹೈಕೋರ್ಟ್ ನಿವೃತ್ತ ಜಡ್ಜ್ ನೇಮಕ ಮಾಡಬೇಕಾಗುತ್ತೆ. ಇದುವರೆಗೂ ಸರ್ಕಾರ ಯಾರನ್ನೂ ನೇಮಕ ಮಾಡಿಲ್ಲ.

ಕೂಡಲೇ ಸಿಬ್ಬಂದಿ ನೇಮಕ ಮಾಡಿದ್ದಲ್ಲಿ ಹಳೇ ಪ್ರಕರಣಗಳಿಗೂ ಮುಕ್ತಿ ಹಾಡಬಹುದು. ಈ ಹಿಂದೆಯೂ ಸಿಬ್ಬಂದಿ ನೇಮಕಕ್ಕೆ ಮನವಿ ಮಾಡಿದ್ರೂ ಸರ್ಕಾರ ಸ್ಪಂದಿಸಿರಲಿಲ್ಲ. ಆದ್ರೆ ಈ ಬಾರಿ ಅಗತ್ಯವಾಗಿ ಸಿಬ್ಬಂದಿ ನೇಮಕ ಮಾಡಿ ಎಂದು ಪತ್ರದ ಮುಖೇನ ವಿಶ್ವನಾಥ್ ಶೆಟ್ಟಿ ಮನವಿ‌ ಮಾಡಿದ್ದಾರೆ.

ABOUT THE AUTHOR

...view details