ಕರ್ನಾಟಕ

karnataka

ETV Bharat / state

ಡ್ರಗ್ಸ್​​ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ವಿದೇಶಿ ಮಹಿಳೆಯರ ಜೊತೆ ವಿರೇನ್ ಖನ್ನಾ ಮೋಜು-ಮಸ್ತಿ ಬಹಿರಂಗ - Viren Khanna Links With Foreign Womens

ಪ್ರತಿಷ್ಠಿತ ಸ್ಟಾರ್ ಹೋಟೆಲ್​ಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಡ್ರಗ್ಸ್​ ಪೂರೈಸುತ್ತಿದ್ದ ಆರೋಪಿ ವಿರೇನ್ ಖನ್ನಾನಿಂದ ಡ್ರಗ್ಸ್​​ ಮಾಫಿಯಾದ ಕುರಿತ ಮಾಹಿತಿ ಪಡೆಯಲು‌ ಸಿಸಿಬಿ ಮತ್ತೆ ವಶಕ್ಕೆ ಪಡೆದಿದೆ.

Viren Khanna arrested by CCB
ಸೆಲೆಕ್ಟೆಡ್ ವಿದೇಶಿ ಮಹಿಳೆಯರ ಜೊತೆ ವಿರೇನ್ ಖನ್ನಾ ಡ್ರಗ್ ಪಾರ್ಟಿ

By

Published : Sep 22, 2020, 3:11 PM IST

ಬೆಂಗಳೂರು: ಪ್ರತಿಷ್ಠಿತ ಪಾರ್ಟಿ ಆಯೋಜಕನಾಗಿರುವ ದೆಹಲಿ ಮೂಲದ ವಿರೇನ್ ಖನ್ನಾನನ್ನ ಸಿಸಿಬಿ ಪೊಲೀಸರು ಒಮ್ಮೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ಮತ್ತೆ ವಿಚಾರಣೆಗೆ ವಶಕ್ಕೆ ಪಡೆದು ಇದೀಗ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರತಿಷ್ಠಿತ ಸ್ಟಾರ್ ಹೋಟೆಲ್​ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ಸ್​ ಪೂರೈಸುತ್ತಿದ್ದ ಆರೋಪಿ ವಿರೇನ್ ಖನ್ನಾನಿಂದ ಡ್ರಗ್ಸ್​​ ಮಾಫಿಯಾದ ಕುರಿತ ಮಾಹಿತಿ ಪಡೆಯಲು‌ ಸಿಸಿಬಿ ಮತ್ತೆ ವಶಕ್ಕೆ ಪಡೆದಿದೆ‌.

ಸದ್ಯ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ 33ನೇ ಸಿಸಿಹೆಚ್ ಕೋರ್ಟ್ ನಿಂದ ಅನುಮತಿ ಪಡೆದು, ಸಿಸಿಬಿ ಇನ್ಸ್‌ಪೆಕ್ಟರ್ ಮಹಮ್ಮದ್ ಸಿರಾಜ್ ನೇತೃತ್ವದಲ್ಲಿ ಆರೋಪಿ‌ ವಿರೇನ್​ ಖನ್ನಾನನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಆರೋಪಿ ಆಯ್ದ ಹೈಫೈ ವಿದೇಶಿ ಮಹಿಳೆಯರ ಜೊತೆ ಲಿಂಕ್ ಹೊಂದಿರುವ ಮಾಹಿತಿ ಬಯಲಾಗಿದೆ. ಈ ವಿದೇಶಿ‌ ಮಹಿಳೆಯರನ್ನ ಕೂಡ ಪಾರ್ಟಿಗೆ ಆಹ್ವಾನಿಸಿ ಡ್ರಗ್ಸ್​ ಪೂರೈಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಸದ್ಯ ದೆಹಲಿ ಮೂಲದ ವಿರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿ ಬಹುತೇಕ ಪೆಡ್ಲರ್​ಗಳನ್ನು ಮಟ್ಟ ಹಾಕಲು ಮುಂದಾಗಿದ್ದಾರೆ.

ABOUT THE AUTHOR

...view details