ಬೆಂಗಳೂರು:ನಗರದ ಕೊಮ್ಮಘಟ್ಟ ಹೆಲಿಪ್ಯಾಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೀಳ್ಕೊಡುಗೆ ವೇಳೆ ಎಡವಟ್ಟು ನಡೆದಿದ್ದು, ಎಚ್ಚೆತ್ತುಕೊಂಡ ಎಸ್ಪಿಜಿ ಪ್ರೋಟೋಕಾಲ್ ಉಲ್ಲಂಘನೆ ತಡೆದಿರುವುದು ಕಂಡುಬಂದಿದೆ.
ಪ್ರಧಾನಿ ಬೀಳ್ಕೊಡುಗೆ ಸ್ವೀಕರಿಸಲು ಆಗಮಿಸಿದ ವೇಳೆ ಲೈನಪ್ ಲೈನ್ ದಾಟಿ ಮುಂದೆ ಹೋಗಿದ್ದ ಬಿಜೆಪಿ ಪ್ರೋಟೋಕಾಲ್ ಇನ್ ಚಾರ್ಜ್ ಆರ್. ಪ್ರಕಾಶ್ ಕೆಲಕ್ಷಣ ಮೋದಿ ಸೇರಿ ಎಸ್ಪಿಜಿ ತಂಡ ಅವಕ್ಕಾಗುವಂತೆ ಮಾಡಿದರು. ಕೂಡಲೇ ಪ್ರಕಾಶ್ರನ್ನು ತಡೆದು ಹಿಂದೆ ಸರಿದ ಮೋದಿ ಅಲ್ಲೇ ನಿಲ್ಲಿ, ಯಾಕೆ ಮುಂದೆ ಬರುತ್ತಿದ್ದೀರಿ, ನಾನೇ ಬರುತ್ತಿದ್ದೇನಲ್ಲಾ, ಅಲ್ಲೇ ನಿಲ್ಲಿ ಎಂದು ಕೆಲ ಕ್ಷಣ ಬಿಟ್ಟು ಮುಂದೆ ಬಂದು ಮಾತನಾಡಿಸಿದರು.