ಬೆಂಗಳೂರು:ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದರೂ ಜನರು ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಇದರ ಪರಿಣಾಮ ದಿನದಿಂದ ದಿನಕ್ಕೆ ಗಣನೀಯವಾಗಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕೊರೊನಾ ನಿಯಮ ಉಲ್ಲಂಘಿಸಿದ್ದವರ ವಿರುದ್ಧ ಪ್ರಕರಣ ದಾಖಲಿಸಿ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಕೊರೊನಾ ನಿಯಮ ಉಲ್ಲಂಘನೆ: 1 ಕೋಟಿ ರೂ.ದಂಡ ಸಂಗ್ರಹ! - ಹೇಮಂತ್ ನಿಂಬಾಳ್ಕರ್
ಒಟ್ಟು 50,706 ಕೇಸ್ಗಳಿಂದ ಒಂದು ಕೋಟಿಗಿಂತ ಅಧಿಕ ದಂಡ ಸಂಗ್ರಹಿಸಲಾಗಿದೆ ಎಂದು ನಗರ ಪೊಲೀಸ್ ಇಲಾಖೆಯ ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕೊರೊನಾ ನಿಯಮ ಉಲ್ಲಂಘನೆ
ಪ್ರಮುಖವಾಗಿ ಅನ್ಲಾಕ್ ಬಳಿಕ ನಗರದಲ್ಲಿ ಮಾಸ್ಕ್ ಹಾಕದೆ ವಾಹನ ಸವಾರರು ಓಡಾಡುವುದನ್ನು ಗಮನಿಸಿ ಬೆಂಗಳೂರು ನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಜೂನ್ 9ರಿಂದ ಈವರೆಗೂ 46,959 ಪ್ರಕರಣ ದಾಖಲಿಸಿ 93.86 ಲಕ್ಷ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ 3,747 ಕೇಸ್ ದಾಖಲಿಸಿ 7 ಲಕ್ಷ ದಂಡ ವಿಧಿಸಲಾಗಿದೆ.
ಒಟ್ಟು 50,706 ಕೇಸ್ಗಳಿಂದ ಒಂದು ಕೋಟಿಗಿಂತ ಅಧಿಕ ದಂಡ ಸಂಗ್ರಹಿಸಲಾಗಿದೆ ಎಂದು ನಗರ ಪೊಲೀಸ್ ಇಲಾಖೆಯ ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.