ಬೆಂಗಳೂರು :ಕೃಷಿ ಜಮೀನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕಿ ಯಾರು ಬೇಕಾದರೂ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸಿ ಕೃಷಿ ಕಾರ್ಯಕೈಗೊಳ್ಳುವ ಅವಕಾಶ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕೆಲ ಸೂಚನೆ ನೀಡಿದೆ.
ಭೂ ಸುಧಾರಣಾ ಕಾಯ್ದೆಯ ಉಲ್ಲಂಘನೆ ಪ್ರಕರಣ ತಕ್ಷಣ ವಿಲೇವಾರಿಗೆ ಕಂದಾಯ ಇಲಾಖೆ ಸೂಚನೆ - ಕರ್ನಾಟಕ ಭೂ ಸುಧಾರಣಾ ಕಾಯ್ದೆ
ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 79 ಎ, ಬಿ ಉಲ್ಲಂಘನೆಯ ಸಂಶಯದಡಿ ದಾಖಲಾಗಿರುವ ಪ್ರಕರಣಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಎಲ್ಲಾ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸೂಚನೆ ಕಂದಾಯ ಇಲಾಖೆ ಸೂಚಿಸಿದೆ..
ಭೂ ಸುಧಾರಣೆ ಕಾಯ್ದೆಯ 79ಎ, ಬಿ ಕಲಂಗಳನ್ನು ನಿರಾಶನ ಮಾಡಿರುವ ರಾಜ್ಯ ಸರ್ಕಾರ, ಈ ಕಲಂ ಉಲ್ಲಂಘನೆಯ ಸಂಶಯದಡಿ ದಾಖಲಾಗಿರುವ ಪ್ರಕರಣಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ರಾಜ್ಯದ ನಾನಾ ಕಡೆ ಇರುವ 13, 814 ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. ಕೆಲವು ಪ್ರಕರಣಗಳನ್ನು ಪರಿಶೀಲನೆ ನಡೆಸಿ ಸರ್ಕಾರ ಹೆಸರಿಗೆ ಪಹಣಿ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಇನ್ನು, ಸಂಶಯಾಸ್ಪದವಾಗಿ ಮಾರಾಟಗಾರರ ಹೆಸರಿನಲ್ಲಿಯೇ ಪಹಣಿ ಇದ್ದರೆ ಇಂತಹ ಪ್ರಕರಣಗಳಲ್ಲಿ ಖರೀದಿದಾರರ ಹೆಸರು ಪಹಣಿಯಲ್ಲಿ ಸೇರಿಸಲು ಕ್ರಮ ವಹಿಸಬೇಕು.
ಕೆಲ ಪ್ರಕರಣದಲ್ಲಿ ಖರೀದಿದಾರರ ಹೆಸರಿಗೆ ಪಹಣಿ ದಾಖಲಾಗಿದೆ. ಅಂತಹ ದಾಖಲೆಗಳ ಮೇಲೆ ‘ಭೂ ಸುಧಾರಣಾ ಶಾಸನದ ಉಲ್ಲಂಘನೆಯ ಸಂಶಯ ಇದೆ ಎಂದು ನಮೂದಿಸದಿದ್ರೆ, ಅದನ್ನು ತೆಗೆದುಹಾಕಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಭೂಮಿ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.