ಕರ್ನಾಟಕ

karnataka

ETV Bharat / state

ನಿಯಮ ಉಲ್ಲಂಘನೆ: ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು - Bangalore

ಕೊರೊನಾ ಸಂದರ್ಭ ಟ್ರಾಫಿಕ್​ ನಿಯಮ ಉಲ್ಲಂಘನೆ ಮಾಡಿದವರಿಗೆ ತಂತ್ರಜ್ಞಾನದ ಮೂಲಕ ಬೆಂಗಳೂರು ಪೊಲೀಸರು ದಂಡ ವಿಧಿಸಿದ್ದಾರೆ‌.

Bangalore
ವಾಹನ ಸವಾರರಿಗೆ ಶಾಕ್ ನೀಡಿದ ಸಂಚಾರಿ ಪೊಲೀಸರು

By

Published : Aug 19, 2020, 9:45 AM IST

ಬೆಂಗಳೂರು:ಕೊರೊನಾ ಇರುವ ಸಂಧರ್ಭದಲ್ಲಿ ಸಂಚಾರಿ ನಿಯಮ ಉಲ್ಲಂಘನೆ‌ ಮಾಡಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೊರೊನಾ ಇರುವ ಕಾರಣ ಟ್ರಾಫಿಕ್​ ನಿಯಮ ಉಲ್ಲಂಘನೆ ಮಾಡಿದವರಿಗೆ ತಂತ್ರಜ್ಞಾನದ ಮೂಲಕ ದಂಡ ವಿಧಿಸಿದ್ದಾರೆ‌.

ಪೊಲೀಸರು ರಸ್ತೆಯ ಬಳಿ ಇಲ್ಲವೆಂದು ರಾಜಾರೋಷಾವಾಗಿ ವಾಹನ ಸವಾರರು ಓಡಾಡಿದ್ರು. ಸದ್ಯ ಪೊಲೀಸರು ಸಂಚಾರ ಕಾಣ್ಗಾವಲು ಕ್ಯಾಮರಾ, ಸಂಚಾರ ಪೊಲೀಸರ ಡಿಜಿಟಲ್ ಕ್ಯಾಮರಾ, ಪಬ್ಕಿಕ್ ಐ ಆ್ಯಪ್, ಹಾಗೆಯೇ ರೆಡ್ ಲೈಟ್ ವಯಲೇಷನ್ ಡಿಟೆಕ್ಷನ್​ ಕ್ಯಾಮರಾ, ಡಿಜಿ ಟ್ಯಾಬ್, ಐ ಚೇಂಜ್ ಮೈ ಸಿಟಿ, ಎಫ್​ಟಿವಿಆರ್ ಮೊಬೈಲ್ ಆ್ಯಪ್​, ಫೇಸ್​ಬುಕ್, ಟ್ವಿಟರ್ ಹಾಗೂ ಸಾರ್ವಜನಿಕರ ದೂರುಗಳ ಮೂಲಕ ಮಾರ್ಚ್​ನಿಂದ ಇಲ್ಲಿಯವರೆಗೆ 17,49,610 ಕೇಸ್ ದಾಖಲಿಸಿ 96,26,74,100 ದಂಡ ಹಾಕಿದ್ದಾರೆ.

ಯಾವೆಲ್ಲಾ ಪ್ರಕರಣ: ಸಿಗ್ನಲ್ ಜಂಪಿಂಗ್ -32,677, ಏಕಮುಖ ಸಂಚಾರ-17,254, ಮೊಬೈಲ್ ಬಳಕೆ-14011, ಜೀಬ್ರಾ ಕ್ರಾಸ್ ಮೇಲೆ ವಾಹನ ನಿಲುಗಡೆ- 10,723, ನೋ ಪಾರ್ಕಿಂಗ್- 7225, ಅತಿವೇಗದ ಚಾಲನೆ- 609, ತ್ರಿಬಲ್ ರೈಡಿಂಗ್- 2624, ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ- 386, ನೋಂದಣಿ ಫಲಕ ಇಲ್ಲದಿರುವುದು-12,289, ಹೆಲ್ಮೆಟ್​ ಧರಿಸದೆ ಸಂಚಾರ ಮಾಡಿರವುದು-74,46,673, ಹಿಂಬದಿ ಸವಾರ ಹೆಲ್ಮೆಟ್​ ಧರಿಸದೆ ಇರುವುದು- 425788 ಸೇರಿದಂತೆ ಹಲವು ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ತನಿಖೆ‌ ಮುಂದುವರೆಸಿದ್ದಾರೆ.

ABOUT THE AUTHOR

...view details