ಕರ್ನಾಟಕ

karnataka

ETV Bharat / state

ವಿನುತ್​ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಗುಂಡೇಟು - ಆನೇಕಲ್

ವಿನುತ್​ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹೋದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪೊಲೀಸರು ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

accused
ಆರೋಪಿಗಳು

By

Published : Nov 2, 2020, 8:56 PM IST

ಆನೇಕಲ್: ಇತ್ತೀಚೆಗಷ್ಟೇ ಬೆಸ್ತಮಾನಹಳ್ಳಿಯಲ್ಲಿ ವಿನುತ್(23) ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದ, ನಾಲ್ವರು ಆರೋಪಿಗಳಿಗೆ ಅತ್ತಿಬೆಲೆ ಪೊಲೀಸರು ಗುಂಡಿನ‌ ರುಚಿ ತೋರಿಸಿದ್ದಾರೆ.

ಆನೇಕಲ್ ತಾಲೂಕಿನ‌ ಮುತ್ತಾನಲ್ಲೂರಿನ ಬಳಿ‌ ಇಬ್ಬರು ಆರೋಪಿಗಳನ್ನು‌ ಬಂಧಿಸಲು ತೆರಳಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ಪ್ರತಿದಾಳಿ‌ ನಡೆಸಿದಾಗ ಗುಂಡೇಟಿನ ಮೂಲಕ ಪೊಲೀಸರು ಉತ್ತರಿಸಿ ಇಬ್ಬರು ಆರೋಪಿಗಳನ್ನು‌ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಳಿದಂತೆ ಆವಡದೇನಹಳ್ಳಿ‌ ಬಳಿ ಮತ್ತಿಬ್ಬರಿಗೆ ಇದೇ ರೀತಿ ಗುಂಡೇಟು ನೀಡಿದ್ದು, ಒಟ್ಟು ನಾಲ್ವರು ಆರೋಪಿಗಳ ಕಾಲುಗಳಿಗೂ ಶೂಟ್ ಮಾಡಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಗಂಗಾ, ಬಸವ, ಗೋಪಿ ಮತ್ತು ಅನಂತ್ ಗುಂಡೇಟು ತಿಂದ ಕೊಲೆ ಆರೋಪಿಗಳಾಗಿದ್ದಾರೆ.

ಮಹೇಶ್ ಮತ್ತು ಸುರೇಶ್ ಎಂಬ ಪೇದೆಯ ಮೇಲೆಯ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ ಗಂಗಾ ಮತ್ತು ಗೋಪಿಯ ಬಲಗಾಲಿಗೆ ಆನೇಕಲ್ ಡಿವೈಎಸ್ಪಿ ಮಹಾದೇವ್ ಮತ್ತು ಆನೇಕಲ್ ಇನ್ಸ್​ಪೆಕ್ಟರ್ ಕೃಷ್ಣರವರಿಂದ ಗುಂಡು ಹಾರಿಸಿದ್ದು, ಪೊಲೀಸರೊಂದಿಗೆ ಆರೋಪಿಗಳೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇರ್ಫಾನ್ ಮತ್ತು ನಾಗರಾಜ್ ಎಂಬ ಪೇದೆ ಎಂಬುವವರ ಮೇಲೆ ಹಲ್ಲೆಗೆ ಮುಂದಾಗಿದ್ದ ಅನಂತ್ ಮತ್ತು ಬಸವನ ಮೇಲೆ ಅತ್ತಿಬೆಲೆ ಇನ್ಸ್​ಪೆಕ್ಟರ್ ಸತೀಶ್ ಮತ್ತು ಸರ್ಜಾಪುರ ಎಸ್ಐ ಹರೀಶ್ ರಿಂದ ಗುಂಡು ಹಾರಿಸಲಾಗಿದೆ.

ಅತ್ತಿಬೆಲೆ ಬಳಿಯ ಶೆಟ್ಟಿಹಳ್ಳಿಯಲ್ಲಿ ವಿನುತ್ ಕೊಲೆ :30ನೇ ತಾರೀಖಿನಂದು ನಡು ರಸ್ತೆಯಲ್ಲಿಯೇ ಬೆಳಗ್ಗೆ ವಿನುತ್​ನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಹಿಂದೆ ದೇವರಾಜ್ ಎಂಬುವವನ್ನು ಹತ್ಯೆಗೈದಿದ್ದ ವಿನುತ್ ಮೇಲೆ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿನುತ್ ಹತ್ಯೆಗೂ ಮುನ್ನ ಇವರ ಮಾವ ಬೆಸ್ತಮಾನಹಳ್ಳಿ ಸುನಿಲ್ ಮೈಸೂರು ರಸ್ತೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದ.

ABOUT THE AUTHOR

...view details