ಬೆಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಹಿನ್ನೆಲೆ ಸಾರಿಗೆ ಇಲಾಖೆಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಂತಿನಗರದ ಆರ್ಟಿಓ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ರಸ್ತೆ ಸುರಕ್ಷತೆ-ಜೀವನದ ರಕ್ಷೆ ಧ್ಯೇಯದೊಂದಿಗೆ ಜನರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ರಸ್ತೆ ಸುರಕ್ಷತಾ ಸಪ್ತಾಹ ಹಿನ್ನೆಲೆ ಕಾರ್, ಬೈಕ್, ಆಟೋಗಳ ಱಲಿ ಆಯೋಜಿಸಿದ್ದು, ಪ್ರಮುಖವಾಗಿ ಡೈಂಮ್ಲರ್ ಬಿಬಿ18, ಫೋರ್ಡ್ ಎ, ಆಸ್ಟಿನ್, ಮೋರೆಸ್, ಕ್ಯಾಡಿಲ್ಯಾಕ್, ಮರ್ಸಿಡಿಸ್, ಅಂಬಾಸಿಡರ್ ಹಾಗೂ ಶವರ್ಲೆ, ಬ್ಯುಕ್ ಸೇರಿದಂತೆ 80-100 ವಿಂಟೇಜ್ ಕಾರ್ಗಳು ಗಮನ ಸೆಳೆಯುತ್ತಿದ್ದವು. ಮತ್ತೊಂದು ವಿಶೇಷ ಅಂದರೆ ಈ ಬಾರಿಯ ರ‍್ಯಾಲಿಯಲ್ಲಿ ಮಹಿಳಾ ಡ್ರೈವರ್ಗಳೇ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.