ಕರ್ನಾಟಕ

karnataka

ETV Bharat / state

ಗ್ರಾಮ ಲೆಕ್ಕಿಗರು ಇನ್ಮುಂದೆ 'ಗ್ರಾಮ ಆಡಳಿತ ಅಧಿಕಾರಿ': ಸರ್ಕಾರ ಆದೇಶ - ಗ್ರಾಮ ಆಡಳಿತ ಅಧಿಕಾರಿ

ಗ್ರಾಮ ಲೆಕ್ಕಿಗರು ಇನ್ಮುಂದೆ ಗ್ರಾಮ ಆಡಳಿತ ಅಧಿಕಾರಿ. ಹೆಸರು ಬದಲಿಸಿ ಸರ್ಕಾರ ಆದೇಶ.

ಗ್ರಾಮ ಆಡಳಿತ ಅಧಿಕಾರಿ
ಗ್ರಾಮ ಆಡಳಿತ ಅಧಿಕಾರಿ

By

Published : Dec 6, 2022, 8:45 PM IST

ಬೆಂಗಳೂರು: ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರ ವೃಂದದ ಹುದ್ದೆಯನ್ನು 'ಗ್ರಾಮ ಆಡಳಿತ ಅಧಿಕಾರಿ' ಎಂದು ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ, ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇವಲ ಹುದ್ದೆಯ ಹೆಸರನ್ನು ಮಾತ್ರ ಬದಲಿಸಲಾಗಿದೆ. ಗ್ರಾಮ ಲೆಕ್ಕಿಗ ಎಂದು ಕರೆಯುವ ಬದಲು ಇನ್ನು ಮುಂದೆ ಗ್ರಾಮ ಆಡಳಿತ ಅಧಿಕಾರಿ ಎಂದು ಕರೆಯಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮ ಆಡಳಿತ ಅಧಿಕಾರಿಯಾಗಿ ಬದಲಿಸಿ ಸರ್ಕಾರ ಆದೇಶ

ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗೆ ಅನ್ವಯಿಸುವಂತೆ ಸೂಕ್ತ ತಿದ್ದುಪಡಿ ತರಲು ಪ್ರತ್ಯೇಕ ಕ್ರಮ ವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಗ್ರಾಮ ಲೆಕ್ಕಿಗರು ಎಂಬ ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸುವ ಕುರಿತು ಪರಿಶೀಲಿಸುವಂತೆ ಕಂದಾಯ ಸಚಿವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಈ ಸಂಬಂಧ ಅಭಿಪ್ರಾಯ ಕೋರಲಾಗಿತ್ತು. ಹೆಸರು ಬದಲಾವಣೆಗೆ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಯ ಹೆಸರನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಿಸಲಾಗಿದೆ ಎಂದು ತಿಳಿಸಲಾಗಿದೆ.

ಗ್ರಾಮ ಆಡಳಿತ ಅಧಿಕಾರಿಯಾಗಿ ಬದಲಿಸಿ ಸರ್ಕಾರ ಆದೇಶ

ಇದನ್ನೂ ಓದಿ: ಗ್ರಾಮ‌ ಲೆಕ್ಕಿಗನ ಸಾಹಸ: ಚಾಮರಾಜನಗರದ 189 ಹಳ್ಳಿ ಚರಿತ್ರೆ ಬರೆದ ಬಳ್ಳಾರಿ ಹೈದ!

ABOUT THE AUTHOR

...view details