ಬೆಂಗಳೂರು :ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಸಿಲುಕಿದ್ದ 30 ಕನ್ನಡಿಗರಿಗೆ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರ. ಕಾರ್ಯದರ್ಶಿ ವಿಜಯೇಂದ್ರ ನೆರವಿನ ಹಸ್ತ ಚಾಚಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಸಿಲುಕಿದ್ದ ಕನ್ನಡಿಗರಿಗೆ ವಿಜಯೇಂದ್ರ ನೆರವಿನ ಹಸ್ತ.. - ಪ್ರಯಾಗ್ರಾಜ್ನಲ್ಲಿ ಸಿಲುಕಿದ್ದ ಕನ್ನಡಿಗರು
ಕೊರೊನಾ ವೈರಸ್ ಲಾಕ್ಡೌನ್ ನಿಂದಾಗಿ ಪ್ರಯಾಗ್ರಾಜ್ನಲ್ಲಿ ಸಿಲುಕಿದ್ದ 30 ಕನ್ನಡಿಗರನ್ನು ಬಸ್ ಮೂಲಕ ವಿಜಯೇಂದ್ರ ಸಾರಥ್ಯದಲ್ಲಿ ಕರ್ನಾಟಕಕ್ಕೆ ಕರೆ ತರಲಾಗಿದೆ.
ಪ್ರಯಾಗ್ರಾಜ್ನಲ್ಲಿ ಸಿಲುಕಿದ್ದ ಕನ್ನಡಿಗರು
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಸಿಲುಕಿದ್ದ 30 ಕನ್ನಡಿಗರು ವಾಪಸ್ ಕರ್ನಾಟಕಕ್ಕೆ ಬರಲು ಬಿಎಸ್ವೈ ಪುತ್ರ ನೆರವಾಗಿದ್ದಾರೆ. ಈ ಕನ್ನಡಿಗರು ಲಾಕ್ಡೌನ್ಗೂ ಮುನ್ನ ಕಾಶಿ ಯಾತ್ರೆಗೆ ತೆರಳಿದ್ದರು. ಲಾಕ್ಡೌನ್ ಘೋಷಣೆ ಬಳಿಕ ಕಂಗಾಲಾಗಿ, ತಮಗೆ ಸಹಾಯ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ವಿಜಯೇಂದ್ರ, ಕನ್ನಡಿಗರು ಊರಿಗೆ ತಲುಪಲು ಬಸ್ ವ್ಯವಸ್ಥೆ ಮಾಡಿಸಿದ್ದರು. ನಿನ್ನೆ ರಾತ್ರಿ ಬಸ್ ಮೂಲಕ ಬೆಂಗಳೂರಿಗೆ ಕನ್ನಡಿಗರು ವಾಪಸ್ ಆಗಿದ್ದಾರೆ.