ಕರ್ನಾಟಕ

karnataka

ETV Bharat / state

ವಿಜಯಪುರ ಮಹಾನಗರ ಪಾಲಿಕೆ, ಕೊಳ್ಳೇಗಾಲ ನಗರಸಭೆ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ: ಸಿಎಂ ಬೊಮ್ಮಾಯಿ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಯತ್ನಾಳ್​​ಗೆ ಫೋನ್ ಮಾಡಿ ಸಿಎಂ ಅಭಿನಂದನೆ
ಯತ್ನಾಳ್​​ಗೆ ಫೋನ್ ಮಾಡಿ ಸಿಎಂ ಅಭಿನಂದನೆ

By

Published : Oct 31, 2022, 3:12 PM IST

Updated : Oct 31, 2022, 4:57 PM IST

ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆ ಮತ್ತು ಕೊಳ್ಳೇಗಾಲ ನಗರಸಭೆ ಉಪ ಚುನಾವಣಾ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಭಿಪ್ರಾಯಪಟ್ಟಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿದ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ‌, ನಿಮ್ಮ ನೇತೃತ್ವದಲ್ಲಿ ಒಳ್ಳೆಯ ಸಂದೇಶ ರವಾನೆಯಾಗಿದೆ. ಪಾಲಿಕೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೀರಾ. ಈ ಚುನಾವಣಾ ಫಲಿತಾಂಶ ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಿದೆ ಎಂದು ದೂರವಾಣಿ ಮೂಲಕ ಶುಭಾಶಯ ಕೋರಿದರು.

ಹಾಗೆಯೇ ಸಿಎಂ ಟ್ವೀಟ್ ಮಾಡಿ, 'ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ನಮ್ಮ ಪಕ್ಷ ಅಭೂತಪೂರ್ವ ಸಾಧನೆಗೈದಿದ್ದು, ವಿಜಯ ಪತಾಕೆ ಹಾರಿಸಿದ ಪ್ರತಿಯೊಬ್ಬ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮೆಚ್ಚಿ ಮತ ನೀಡಿದ ಮತದಾರ ಪ್ರಭುಗಳಿಗೆ ನನ್ನ ವಿಶೇಷ ಧನ್ಯವಾದಗಳು' ಎಂದು ಪೋಸ್ಟ್ ಮಾಡಿದ್ದಾರೆ.

(ಓದಿ: ವಿಜಯಪುರ ಪಾಲಿಕೆ ಚುನಾವಣೆ: ಅತಂತ್ರ ಫಲಿತಾಂಶ.. 17 ಕಡೆ ಬಿಜೆಪಿ ಜಯಭೇರಿ, 10 ರಲ್ಲಿ ಕಾಂಗ್ರೆಸ್​​ಗೆ ಜಯ)

ಕೊಳ್ಳೇಗಾಲ ನಗರಸಭೆಯ ಒಟ್ಟು 07 ವಾರ್ಡ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ 06 ಅಭ್ಯರ್ಥಿಗಳು ಜಯ ಸಾಧಿಸಿರುವುದು ಬಹಳಷ್ಟು ಸಂತಸ ತಂದಿದೆ. ಈ ಫಲಿತಾಂಶ ಮುಂಬರುವ ಚುನಾವಣೆಯಲ್ಲಿ, ಕರ್ನಾಟಕದೆಲ್ಲೆಡೆ ಕಮಲ ಅರಳುವ ಮುನ್ಸೂಚನೆಯಾಗಿದೆ. ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಶಾಸಕ ಡಾ. ಎನ್. ಮಹೇಶ್, ಕಾರ್ಯಕರ್ತರಿಗೆ ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ‌ ಟ್ವೀಟ್ ಮಾಡಿದ್ದಾರೆ.

Last Updated : Oct 31, 2022, 4:57 PM IST

ABOUT THE AUTHOR

...view details