ಬೆಂಗಳೂರು:ಮನೆಯ ಮುಂದೆ ಕುಳಿತುಕೊಂಡು ಮಗು ಆಟವಾಡಿಸ್ತಿದ್ದ ವೇಳೆ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಓಡಿ ಹೋಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರ ಭರ್ಜರಿ ಕಾರ್ಯಾಚರಣೆ: 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ; ಖದೀಮನ ಬಂಧನ
ಆರು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯ ಬಂಧನ ಮಾಡುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯನಗರ ಪೊಲೀಸರು ಈ ಪ್ರಕರಣ ಬೇಧಿಸಿದ್ದು, ನಗರದ ವಿವಿಧ ಠಾಣೆಯ ಆರು ಪ್ರಕರಣಗಳಲ್ಲಿ ಬೇಕಾಗಿದ್ದ ಖದೀಮನ ಬಂಧಿಸಿದ್ದಾರೆ. ಸರಗಳ್ಳತನದ ಬಗ್ಗೆ ವಿಜಯನಗರ ಪೊಲೀಸರು ಠಾಣೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಭಾನು ಇರಾನಿ ಮತ್ತು ಅವುನು ಇರಾನಿ ಎಂಬುವರನ್ನು ಮೊದಲು ಪೋಲಿಸರು ಬಂಧನಕ್ಕೊಳಪಡಿಸಿದ್ದರು. ಆಗ ಮುಖ್ಯ ಆರೋಪಿಯ ಹೆಸರು ಬಾಯ್ಬಿಟ್ಟಿದ್ದಾರೆ. ಪೊಲೀಸರು ಜನವರಿ 3ರಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಿಯಾಜ್ ಅಹಮದ್ನನ್ನ ಧಾರವಾಡದಲ್ಲಿ ಪತ್ತೆ ಮಾಡಿದ್ದರು.
ಆರೋಪಿ ತಿಳಿಸಿರುವ ಪ್ರಕಾರ, ವಿಜಯನಗರ ಪೊಲೀಸ್ ಠಾಣೆಯ ಎರಡು ಸರ ಕಳ್ಳತನ ಹಾಗೂ ಮನೆ ಕಳ್ಳತನ ಮಾಗಡಿ ರಸ್ತೆ, ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆ ಕಳ್ಳತನ ಪ್ರಕರಣ ಸೇರಿ ಒಟ್ಟು ಆರು ಕೇಸ್ನ ರೂ 12 ಲಕ್ಷ ರೂ. ಮೌಲ್ಯದ 275 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯನಗರ ಪೊಲೀಸ್ ಠಾಣೆಯ ಎಸ್ಐ ಆರ್.ಸತೀಶ್ ಕುಮಾರ್ ತಿಳಿಸಿದ್ದಾರೆ.