ಕರ್ನಾಟಕ

karnataka

ETV Bharat / state

ವಿದ್ಯಾರಣ್ಯಪುರ ಪೊಲೀಸರ‌ ಬಲೆಗೆ ಬಿದ್ದ ಮೂವತ್ತನೇ ವಯಸ್ಸಿಗೆ ನಟೋರಿಯಸ್ ಎನಿಸಿಕೊಂಡ ಕಳ್ಳ ! - ದ್ವಿಚಕ್ರ ವಾಹನಗಳನ್ನ ವಶಕ್ಕೆ

ಹಲವು ಬಾರಿ ಜೈಲು ಶಿಕ್ಷೆ ಎದುರಿಸಿದ್ದರೂ ಬದಲಾಗದ ಆರೋಪಿಯನ್ನ ಸದ್ಯ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದು ಒಟ್ಟು 5 ಲಕ್ಷ ಮೌಲ್ಯದ ಮೂರು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ‌.

ಮೂವತ್ತನೇ ವಯಸ್ಸಿಗೆ ನಟೋರಿಯಸ್ ಎನಿಸಿಕೊಂಡ ಕಳ್ಳ ವಿದ್ಯಾರಣ್ಯಪುರ ಪೊಲೀಸರ‌ ಬಲೆಗೆ
vidyaranyapur police arrest notorious thief

By

Published : Dec 22, 2022, 11:39 AM IST

ಬೆಂಗಳೂರು:ರಾಜ್ಯದ ವಿವಿಧೆಡೆ ದ್ವಿಚಕ್ರ ವಾಹನ, ಕಾರುಗಳನ್ನ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸದ್ದಾಂ ಹುಸೇನ್‌ ಬಂಧಿತ ಆರೋಪಿ.

ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವೆಡೆ ಕೈಚಳಕ ತೋರಿಸಿದ್ದ ಆರೋಪಿಯ ವಿರುದ್ಧ ಬೆಂಗಳೂರಿನ ವಿದ್ಯಾರಣ್ಯಪುರ, ಬಾಗಲಗುಂಟೆ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ಹಲವೆಡೆ ಪ್ರಕರಣಗಳಿದ್ದವು. ಹಲವು ಬಾರಿ ಜೈಲು ಶಿಕ್ಷೆ ಎದುರಿಸಿದ್ದರೂ ಬದಲಾಗದ ಆರೋಪಿಯನ್ನ ಸದ್ಯ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದು, ಒಟ್ಟು 5 ಲಕ್ಷ ಮೌಲ್ಯದ ಮೂರು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ‌.

ಇದನ್ನೂ ಓದಿ: ಕೋರಮಂಗಲ ಡಬಲ್ ಮರ್ಡರ್ ಪ್ರಕರಣ; ಲಕ್ಷ ಲಕ್ಷ ದೋಚಿದವನು ವಿದೇಶಿ ಮದ್ಯಕ್ಕಾಗಿ ಬಂದು ಸಿಕ್ಕಿಬಿದ್ದ

ABOUT THE AUTHOR

...view details