ಕರ್ನಾಟಕ

karnataka

ವಿದ್ಯಾಗಮ ಯೋಜನೆ ಸೋಂಕಿಗೆ ದಾರಿ ಮಾಡಿಕೊಡುತ್ತಿದೆ: ಪ್ರಿಯಾಂಕ ಖರ್ಗೆ

ಚಿಕ್ಕಮಕ್ಕಳು ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ತಾರೆ?. ಏಳರ ನಂತರ ಮಕ್ಕಳಿಗೆ ಶಿಕ್ಷಣ ಮಾಡ್ತೇವೆ ಅಂತಾರೆ. ಆಟ ಆಡುವ ವೇಳೆ ಹೇಗೆ ಅಂತರ ಕಾಪಾಡೋದು?. ಸ್ಯಾನಿಟೈಸರ್​ ಸರಿಯಾಗಿ ಬಳಕೆ ಹೇಗೆ ಮಾಡೋಕೆ ಸಾಧ್ಯ?. ಮಕ್ಕಳಿಗೆ ಮಾಸ್ಕ್ ಹಾಕಿಕೊಂಡಿರೋಕೆ‌ ಸಾಧ್ಯವೇ?. ಇವೆಲ್ಲವನ್ನೂ ಸರ್ಕಾರ ಗಮನಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

By

Published : Oct 9, 2020, 4:30 PM IST

Published : Oct 9, 2020, 4:30 PM IST

Updated : Oct 9, 2020, 5:03 PM IST

ಮಾಜಿ ಸಚಿವ ಪ್ರಿಯಾಂಕ ಖರ್ಗೆ
ಮಾಜಿ ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು: ಶಾಲೆಗಳ ಆರಂಭದ ಬಗ್ಗೆ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಚಿಕ್ಕಮಕ್ಕಳು ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ತಾರಾ? ಎಂದು ಪ್ರಶ್ನಿಸಿದ್ದಾರೆ. ಏಳರ ನಂತರ ಮಕ್ಕಳಿಗೆ ಶಿಕ್ಷಣ ಮಾಡ್ತೇವೆ ಅಂತಾರೆ. ಆಟ ಆಡುವ ವೇಳೆ ಹೇಗೆ ಅಂತರ ಕಾಪಾಡೋದು?. ಸ್ಯಾನಿಟೈಸರ್​ ಸರಿಯಾಗಿ ಬಳಕೆ ಹೇಗೆ ಮಾಡೋಕೆ ಸಾಧ್ಯ?. ಮಕ್ಕಳಿಗೆ ಮಾಸ್ಕ್ ಹಾಕಿಕೊಂಡಿರೋಕೆ‌ ಸಾಧ್ಯವೇ?. ಇವೆಲ್ಲವನ್ನೂ ಸರ್ಕಾರ ಗಮನಿಸಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಾಜಿ ಸಚಿವ ಪ್ರಿಯಾಂಕ ಖರ್ಗೆ

ವಿದ್ಯಾಗಮ ಯೋಜನೆಯೂ ಸರಿಯಾಗಿ ಅನುಷ್ಟಾನಗೊಂಡಿಲ್ಲ. ಅದರಿಂದ ಸೋಂಕು ಹೆಚ್ಚಳಕ್ಕೆ ಅವಕಾಶ ಆಗುತ್ತೆ ಬಿಟ್ರೇ ಇನ್ನೇನಿಲ್ಲ.‌ ಸರ್ಕಾರ ತಮ್ಮ ಬೆನ್ನು ತಟ್ಟುವ ಕೆಲಸ‌ ಮಾಡುತ್ತಿದ್ದಾರೆ ಅಷ್ಟೇ ಎಂದು ಕಿಡಿ ಕಾರಿದರು. ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಾಗ್ತಿದೆ. ತಿಂಗಳಿಗೊಮ್ಮೆ ಶಾಲೆ ಪ್ರಾರಂಭಿಸುತ್ತೇವೆ ಅಂತಿದ್ದಾರೆ. ನಮ್ಮ‌ ಶಿಕ್ಷಣ ಸಚಿವರು ಹೇಳ್ತಾನೇ ಇದ್ದಾರೆ. ಶಾಲೆ ಪ್ರಾರಂಭದ ಬಗ್ಗೆ ತಜ್ಞರ ಅಭಿಪ್ರಾಯ ಪಡೆದಿದ್ದಾರಾ?. ವೈರಲಾಜಿಸ್ಟ್, ವೈದ್ಯರು, ತಜ್ಞರ ಸಲಹೆ ಪಡೆದಿಲ್ಲ. ಮಕ್ಕಳು, ಪೋಷಕರ ಅಭಿಪ್ರಾಯವನ್ನೂ ಪಡೆದಿಲ್ಲ. ಮಕ್ಕಳ ಬಗ್ಗೆ ವೈಜ್ಙಾನಿಕ ಚಿಂತನೆ ಮಾಡಿಲ್ಲ. ಖಾಸಗಿ ಶಾಲೆ ಶುಲ್ಕ ಬಗ್ಗೆ ಮಾತ್ರ ಅವರು ಗಮನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅವರಿಗೆ ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಕಾಳಜಿಯಿಲ್ಲ. ಆನ್‌ಲೈನ್ ಶಿಕ್ಷಣ ಮಾಡ್ತೇವೆ ಅಂತಾರೆ. ಗ್ರಾಮೀಣ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಹೇಗೆ ಸಿಗುತ್ತದೆ. ಶಿಕ್ಷಕರಿಗೆ ಕಳೆದ ಏಳೆಂಟು ತಿಂಗಳಿಂದ ಶಿಕ್ಷೆ ನೀಡ್ತಿದ್ದಾರೆ. ವಿದ್ಯಾಗಮ ಶಿಕ್ಷಣವೂ ಸೋಂಕಿಗೆ ದಾರಿ ಮಾಡಿಕೊಡುತ್ತಿದೆ. ಸರಿಯಾದ ಶಿಕ್ಷಣವೇ ಅಲ್ಲಿ ಸಿಗ್ತಿಲ್ಲ ಎಂದು ಆರೋಪಿಸಿದರು.

Last Updated : Oct 9, 2020, 5:03 PM IST

ABOUT THE AUTHOR

...view details