ಕರ್ನಾಟಕ

karnataka

ETV Bharat / state

ರಾಜ್ಯೋತ್ಸವ ಸಡಗರ: ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಸಿದ ಶಕ್ತಿಸೌಧ - ದೀಪಗಳಿಂದ ಅಲಂಕಾರಗೊಂಡ ವಿಧಾನಸೌಧ

ಕನ್ನಡ ರಾಜ್ಯೋತ್ಸವ ಹಿನ್ನೆಲೆ ವಿಧಾನಸೌಧಕ್ಕೆ ಹಳದಿ, ಕೆಂಪು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಬೆಳಕಿನಲ್ಲಿ ಶಕ್ತಿಸೌಧ ಕಂಗೊಳಿಸುತ್ತಿದೆ.

Vidhana soudha
ವಿಧಾನಸೌಧ

By

Published : Nov 1, 2021, 11:32 PM IST

ಬೆಂಗಳೂರು: ರಾಜ್ಯೋತ್ಸವ ಪ್ರಯುಕ್ತ ಶಕ್ತಿ ಸೌಧಕ್ಕೆ ವಿಶೇಷ ಮೆರಗು ನೀಡಲಾಗಿದ್ದು, ವಿದ್ಯುತ್​ ದೀಪಾಲಂಕಾರದಿಂದ ವಿಧಾನಸೌಧ ಕಂಗೊಳಿಸುತ್ತಿದೆ.

ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಸಿದ ಶಕ್ತಿಸೌಧ

66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ಹಳದಿ, ಕೆಂಪು ಬಣ್ಣದ ವಿದ್ಯುತ್ ದೀಪಗಳಿಂದ ವಿಧಾನಸೌಧವನ್ನು ಅಲಂಕಾರ ಮಾಡಲಾಗಿದೆ. ಬೆಳಕಿನಿಂದ ಕಂಗೊಳಿಸುತ್ತಿರುವ ವಿಧಾನಸೌಧದ ಸೌಂದರ್ಯವನ್ನು ನೂರಾರು ಮಂದಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

ವಿಧಾನಸೌಧದ ಉದ್ಯಾನದಲ್ಲಿನ ಗಿಡಗಳಿಗೆ ಬಣ್ಣ ಬಣ್ಣದ ಬೆಳಕಿನ ಮೂಲಕ ವಿಶೇಷ ಅಲಂಕಾರ ಮಾಡಲಾಗಿದೆ. ಇದರ ಜೊತೆಗೆ ಜನಪದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಪುತ್ಥಳಿಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ಗಣ್ಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ABOUT THE AUTHOR

...view details