ಬೆಂಗಳೂರು:ಇಂದಿನ ವಿಧಾನಪರಿಷತ್ ಕಲಾಪದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಆರೋಗ್ಯಕರ ಪ್ರಶ್ನೋತ್ತರಗಳು ನಡೆದವು.
ಕಲಾಪದಲ್ಲಿ ಆರೋಗ್ಯ ಇಲಾಖೆಯ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಸದಸ್ಯ ಎನ್.ಎಸ್. ಭೋಸರಾಜು ಕೇಳಿದ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಹಾರ ಸಚಿವ ಕೆ.ಗೋಪಾಲಯ್ಯ, ಪ್ರತಿ ವಾರಾಂತ್ಯದಲ್ಲಿ ಒಂದೊಂದು ಜಿಲ್ಲೆಗೆ ಭೇಟಿಕೊಟ್ಟು ತಪಾಸಣೆ ನಡೆಸುತ್ತಿದ್ದೇನೆ. ಕೊರೊನಾ ಹಿನ್ನೆಲೆ ಈ ವಾರ ಭೇಟಿ ನೀಡಲು ಸಾಧ್ಯವಾಗಿಲ್ಲ. ಅಕ್ರಮ ಪತ್ತೆ ಆದಲ್ಲಿ ಕ್ರಮಕೈಗೊಳ್ಳುತ್ತೇನೆ. ಇನ್ನು ಆರೇಳು ತಿಂಗಳು ಕಾಲಾವಕಾಶ ಕೊಡಿ. ಎಲ್ಲಾ ಸಮಸ್ಯೆ ನಿವಾರಿಸಲು ಯತ್ನಿಸುತ್ತೇನೆ. ಒಬ್ಬರಿಗೆ ನಾಲ್ಕೈದು ಪಡಿತರ ಚೀಟಿ ನೀಡಿದ ಆರೋಪ ಇದೆ. ಸಾಕಷ್ಟು ಕಡೆ ಈ ಸಮಸ್ಯೆ ಪತ್ತೆ ಮಾಡಿ ಕ್ರಮಕೈಗೊಂಡಿದ್ದೇವೆ. ಯಾವುದೇ ಸದಸ್ಯರು ಅವರ ಭಾಗದಲ್ಲಿ ಅಕ್ರಮ ಆಗಿದ್ದರೆ ಅದನ್ನು ತಮ್ಮ ಗಮನಕ್ಕೆ ತನ್ನಿ, ಕ್ರಮಕ್ಕೆ ಸೂಚಿಸುತ್ತೇನೆ. ಕೊರೊನಾ ಭೀತಿ ಹಿನ್ನೆಲೆ ಬಯೊಮೆಟ್ರಿಕ್ ವ್ಯವಸ್ಥೆ ತೆಗೆದು ಹಾಕುತ್ತಿದ್ದೇವೆ. ಕಾರ್ಡ್ ಆಧಾರದ ಮೇಲೆ ಪಡಿತರ ವಿತರಿಸುವ ಕಾರ್ಯ ಮಾಡುತ್ತೇವೆ. ಜನ ಆತಂಕ ಪಡುವುದು ಬೇಡ ಎಂದು ತಿಳಿಸಿದರು.