ಬೆಂಗಳೂರು: ವಿಕಲಚೇತನ ಮಹಿಳೆಯೋರ್ವರಿಗೆ ಎಎಸ್ಐ ಒಬ್ಬರು ನಡು ರಸ್ತೆಯಲ್ಲಿ ಬೂಟು ಕಾಲಲ್ಲಿ ಒದ್ದು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ಇದಾಗಿದೆ. ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ಟೋಯಿಂಗ್ ವಾಹನದ ಸಿಬ್ಬಂದಿ ಮೇಲೆ ಮಹಿಳೆ ಕಲ್ಲು ಬೀಸಿದ್ದಾಳೆ. ಅದು ಎಎಸ್ಐ ಮುಖಕ್ಕೆ ತಾಗಿದ್ದು, ರಕ್ತ ಹರಿದಿದೆ. ಸಿಟ್ಟಿನಿಂದ ಟೋಯಿಂಗ್ ವಾಹನದಿಂದ ಕೆಳಗೆ ಇಳಿದು ಬಂದ ಎಎಸ್ಐ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟು ಕಾಲಿನಲ್ಲಿ ಒದ್ದಿದ್ದಾರೆ.
ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಎಎಸ್ಐ, ವಿಕಲಚೇತನ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪದಡಿ ಮಹಿಳೆಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.