ಬೆಂಗಳೂರು: ಉಪಸಮರ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರ ಶಾಸಕ ಭೈರತಿ ಬಸವರಾಜ್ ಹಾಗೂ ಅನರ್ಹ ಶಾಸಕ ಮುನಿರತ್ನ ಭೇಟಿ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಅರುಣ್ ಕುಮಾರ್ ಜಿಯನ್ನು ಭೇಟಿಯಾದ ಈ ಮೂವರು ನಾಯಕರು ಚುನಾವಣೆ ವೇಳೆಯ ಪಕ್ಷ ಸಂಘಟನೆಗಾಗಿ ಧನ್ಯವಾದ ತಿಳಿಸಿದರು.
ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಮೂತನ ಶಾಸಕರು ಬಳಿಕ ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್‌ಜಿಗೆ ಧನ್ಯವಾದ ಹೇಳುವುದಕ್ಕೆ ಬಂದಿದ್ದೆವು. ಚುನಾವಣೆ ಮುಗಿದು, ಫಲಿತಾಂಶ ಬಂದ ಮೇಲೆ ಭೇಟಿಯಾಗುವುದಕ್ಕೆ ಆಗಿರಲಿಲ್ಲ. ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಸಂಘಟನೆ ಮಾಡಿ, ಗೆಲುವಿಗೆ ಕಾರಣಕರ್ತರಾಗಿದ್ದರು. ಇವತ್ತು ಮೂರು ಜನರು ಒಟ್ಟಿಗೆ ಬಂದು ಧನ್ಯವಾದ ಹೇಳಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗುವ ಸಂಬಂಧ ಸದ್ಯಕ್ಕೆ ದೆಹಲಿಗೆ ಹೋಗುವ ಬಗ್ಗೆ ನಿರ್ಧಾರ ಮಾಡಿಲ್ಲ. ಡಿಸೆಂಬರ್ 23 ರ ನಂತರ ನಿರ್ಧಾರ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.