ಕರ್ನಾಟಕ

karnataka

ETV Bharat / state

ಹಿರಿಯ ಪತ್ರಕರ್ತ ಕೊರೊನಾ ಸೋಂಕಿಗೆ ಬಲಿ - Senior journalist K.M. Halappa

ಪತ್ರಕರ್ತರಾಗಿ 25 ವರ್ಷಗಳಿಗೂ ಹೆಚ್ಚು ಕಾಲ ಈ ಸಂಜೆ, ಸಂಜೆವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಪತ್ರಕರ್ತ ಕೆ.ಎಂ‌. ಹಾಲಪ್ಪ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಹಿರಿಯ ಪತ್ರಕರ್ತ ಕೆ.ಎಂ‌. ಹಾಲಪ್ಪ
ಹಿರಿಯ ಪತ್ರಕರ್ತ ಕೆ.ಎಂ‌. ಹಾಲಪ್ಪ

By

Published : Aug 3, 2020, 5:27 PM IST

ಬೆಂಗಳೂರು: ಹಿರಿಯ ಪತ್ರಕರ್ತ ಕೆ.ಎಂ‌. ಹಾಲಪ್ಪ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬೆಳಗುಂಬ ಮೂಲದ ಹಾಲಪ್ಪ, ಪತ್ರಕರ್ತರಾಗಿ 25 ವರ್ಷಗಳಿಗೂ ಹೆಚ್ಚು ಕಾಲ ಈ ಸಂಜೆ, ಸಂಜೆವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ರೈತ ಹೋರಾಟಗಳಲ್ಲೂ ಪಾಲ್ಗೊಂಡಿದ್ದರು. ಕೊರೊನಾ ಪಾಸಿಟಿವ್ ಬಂದ ಕಾರಣ ಜುಲೈ 26 ರಂದು ಅವರು ದೇವನಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪುತ್ರ, ಪುತ್ರಿ, ಸೊಸೆ ಹಾಗೂ ಮೊಮ್ಮಕ್ಕಳಿದ್ದಾರೆ.

ಸಂತಾಪ: ಹಿರಿಯ ಪತ್ರಕರ್ತ ಕೆ.ಎಂ. ಹಾಲಪ್ಪನವರ ಅಗಲಿಕೆ ನನಗೆ ತುಂಬಾ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಆ ದುಃಖ ಭರಿಸುವ ಶಕ್ತಿ ಆ ದೇವರು ಕರುಣಿಸಲೆಂದು ಹಲವು ಪತ್ರಕರ್ತರ ಸಂಘಟನೆಗಳು ಸಂತಾಪ ಸೂಚಿಸಿವೆ.

ABOUT THE AUTHOR

...view details