ಬೆಂಗಳೂರು :ಸದನದಲ್ಲಿ ಬಹುಮತ ಸಾಬೀತುಪಡಿಸಿದ್ದು, ಶೀಘ್ರದಲ್ಲೇ ಕೇಂದ್ರ ನಾಯಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕಲಾಪ ಮುಂದೂಡಿದ ಬಳಿಕ ಮಾತನಾಡಿದ ಅವರು, ಧನ ವಿಧೇಯಕ ಮಸೂದೆಗೆ ವಿಧಾನಸಭೆಯಲ್ಲಿಅಂಗೀಕಾರ ದೊರೆತಿದ್ದು, ಮೇಲ್ಮನೆಯಲ್ಲಿ ಅನುಮತಿ ಸಿಕ್ಕ ನಂತರ ಇಂದೇ ವಿಧೇಯಕಕ್ಕೆ ಜಾರಿಯಾಗುವಂತೆ ನೋಡಿಕೊಳ್ಳುತ್ತೇವೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಸದನದಲ್ಲಿಂದು ಬಹುಮತ ಸಾಬೀತು ಪಡಿಸಿದ್ದು, ಮುಂದಿನ ದಿನಗಳಲ್ಲಿ ಸ್ಥಿರ ಸರ್ಕಾರ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.