ಬೆಂಗಳೂರು :ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ ಹಿನ್ನೆಲೆ ಎಣಿಕಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 06:00 ಗಂಟೆಯಿಂದ ಎಣಿಕಾ ಕಾರ್ಯ ಮುಕ್ತಾಯವಾಗುವವರೆಗೂ ಕೆಲ ಸಂಚಾರ ಮಾರ್ಪಾಡು ಹಾಗೂ ವಾಹನ ನಿಲುಗಡೆ ನಿಷೇಧಿಸಿ ಬೆಂಗಳೂರು ಸಂಚಾರ ಪೊಲೀಸ್ ಪ್ರಕಟಣೆ ತಿಳಿಸಿದೆ.
1 - ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್ & ಕಾಂಪೋಸಿಟ್ ಪಿಯು ಕಾಲೇಜ್, ವಿಠಲ್ ಮಲ್ಯ ರಸ್ತೆಯ ಸುತ್ತಮುತ್ತಲಿನ ಕಸ್ತೂರಬಾ ರಸ್ತೆಯ ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಎಲ್ಲ ರೀತಿಯ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಬದಲಿಯಾಗಿ ವಾಹನ ಸವಾರರರು ಲ್ಯಾವೆಲ್ಲೆ ರಸ್ತೆ/ಎಂ.ಜಿ ರಸ್ತೆ ಮುಖಾಂತರ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಕ್ಲೀನ್ಸ್ ವೃತ್ತದ ಕಡೆಗೆ ಚಲಿಸಬಹುದಾಗಿದೆ.ಆರ್.ಆರ್.ಎಂ.ಆರ್ ರಸ್ತೆ ಹಾಗೂ ಕಸ್ತೂರ ಬಾ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ನಿಲುಗಡೆಗೆ ಅವಕಾಶವಿರಲಿದೆ.
2 - ಮೌಂಟ್ ಕಾರ್ಮಲ್ ಕಾಲೇಜು, ಪ್ಯಾಲೇಸ್ ರಸ್ತೆ, ವಸಂತ ನಗರ, ಪ್ಯಾಲೇಸ್ ರಸ್ತೆಯ ಕಲ್ಪನ ಜಂಕ್ಷನ್‌ನಿಂದ ವಸಂತನಗರದ ಅಂಡರ್ ಪಾಸ್ ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಚಕ್ರವರ್ತಿ ಲೇಔಟ್ ಕಡೆಯಿಂದ ಬರುವ ವಾಹನಗಳು ವಸಂತನಗರದ ಕಡೆಗೆ ಮತ್ತು ಉದಯ ಟಿ. ವಿ ಜಂಕ್ಷನ್ ಕಡೆಯಿಂದ ಬಿಡಿಎ ಕಡೆಗೆ ಚಲಿಸಬಹುದಾಗಿರುತ್ತದೆ. ಎಂ. ವಿ ಜಯರಾಮ್ ರಸ್ತೆಯನ್ನ ಬಳಸಬಹುದಾಗಿರುತ್ತದೆ. ಪ್ಯಾಲೇಸ್ ರಸ್ತೆ ಮತ್ತು ಓಲ್ಡ್ ಹೈಗ್ರೌಂಡ್ ಜಂಕ್ಷನ್‌ನಿಂದ ಕಲ್ಪನಾ ಜಂಕ್ಷನ್ ವರೆಗೆ ಹಾಗೂ ಕಲ್ಪನಾ ಜಂಕ್ಷನ್ ನಿಂದ ಚಂದ್ರಿಕಾ ಹೋಟೆಲ್ ವರೆಗೆ ವಾಹನ ನಿಲುಗಡೆಗೆ ನಿರ್ಬಂಧವಿರಲಿದ್ದು, ಅರಮನೆ ಮೈದಾನದಲ್ಲಿ ವಾಹನ ನಿಲ್ಲಿಸಬಹುದಾಗಿರುತ್ತದೆ.
3 - ಎಸ್.ಎಸ್.ಎಂ.ಆರ್.ವಿ ಪಿಯು ಕಾಲೇಜ್, ಜಯನಗರ, ಎಸ್.ಎಸ್.ಎಂ.ಆರ್.ವಿ ಕಾಲೇಜಿನ ಸಮೀಪದ ರಸ್ತೆಗಳಾದ 36 ನೇ ಕ್ರಾಸ್ ರಸ್ತೆ, 22 ನೇ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ ಮತ್ತು 28 ನೇ ಮುಖ್ಯ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಈಸ್ಟ್ ಎಂಡ್ ಮುಖ್ಯ ರಸ್ತೆ, 32ನೇ ಇ ಕ್ರಾಸ್ ರಸ್ತೆ, 39ನೇ ಕ್ರಾಸ್ ರಸ್ತೆ, 18ನೇ ಮುಖ್ಯರಸ್ತೆಗಳನ್ನ ಬಳಸಬಹುದಾಗಿದೆ.
ಬಿಎಂಟಿಸಿ ಬಸ್ಗಳು 18 ನೇ ಮುಖ್ಯ ರಸ್ತೆ, 32ನೇ ಇ ಕ್ರಾಸ್ ರಸ್ತೆ ಜಂಕ್ಷನ್‌ನಿಂದ ಜಯನಗರ ಜನರಲ್ ಆಸ್ಪತ್ರೆ ಕಡೆಗೆ ತೆರಳಿ 2 ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ ಬಲ ತಿರುವು ಪಡೆದು ಜಯನಗರ ಬಸ್ ಡಿಪೋ ತಲುಪಬಹುದು. ಉಳಿದಂತೆ ಎಲ್ಲ ಬಿಎಂಟಿಸಿ ಬಸ್ಗಳು 18 ನೇ ಮುಖ್ಯ ರಸ್ತೆ ಅಥವಾ 32 ನೇ ಇ ಕ್ರಾಸ್ ರಸ್ತೆ ಮುಖಾಂತರ ಸಂಚರಿಸಿ, ಈಸ್ಟ್ ಎಂಡ್ ಮುಖ್ಯ ರಸ್ತೆ ಮತ್ತು 39 ನೇ ಕ್ರಾಸ್ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.
ಆರ್ ವಿ ಕಾಲೇಜ್ ಮೈದಾನದಲ್ಲಿ ವಾಹನಗಳ ನಿಲುಗಡೆ: ಮತ ಎಣಿಕಾ ಕೇಂದ್ರಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧವಿರಲಿದ್ದು, ಜಯನಗರ 11 ನೇ ಮುಖ್ಯರಸ್ತೆಯಲ್ಲಿರುವ ಶಾಲಿನಿ ಮೈದಾನದಲ್ಲಿ ಮತ್ತು ಆರ್ ವಿ ಕಾಲೇಜ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
4 - ಬಿ.ಎಂ.ಎಸ್ ಮಹಿಳಾ ಕಾಲೇಜು, ಬಸವನಗುಡಿ, ಹಯವದನ ಕ್ರಾಸ್ ನಿಂದ ಕಾಮತ್ ಹೋಟೆಲ್ ಜಂಕ್ಷನ್ ವರೆಗೆ, ಬುಲ್ ಟೆಂಪಲ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ರಾಮಕೃಷ್ಣ ಆಶ್ರಮ ಜಂಕ್ಷನ್‌ನಿಂದ ಹಳ್ಳಿತಿಂಡಿ (ದೊಡ್ಡಗಣಪತಿ ದೇವಸ್ಥಾನದ) ಕಡೆಗೆ ಸಂಚರಿಸುವ ವಾಹನಗಳು ರಾಮಕೃಷ್ಣ ಆಶ್ರಮದ ಹತ್ತಿರ ಬಲ ತಿರುವು ಪಡೆದು ಹಯವದನರಾವ್ (ಅಕ್ಕೂರುಮಠ ರಸ್ತೆ) ರಸ್ತೆಯ ಮುಖಾಂತರ ಹನುಮಂತನಗರದ ಕಡೆಗೆ ಸಂಚರಿಸಬಹುದಾಗಿದೆ.