ಕರ್ನಾಟಕ

karnataka

ETV Bharat / state

ಬೈಕ್​, ಕಾರು ತೆಗೆಯುವ ಮುನ್ನ ಈ ಸುದ್ದಿ ಮರೆಯದೇ ಓದಿ... ಭಾಸ್ಕರ್​ ರಾವ್​ ಕೊಟ್ಟಿದ್ದಾರೆ ಶಾಕಿಂಗ್​ ನ್ಯೂಸ್​ - ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಲಾಕ್​ಡೌನ್

ಲಾಕ್​ಡೌನ್​ ಇದ್ದರೂ ಬೇಕಾ ಬಿಟ್ಟಿ ವಾಹನ ಚಲಾಯಿಸಿಸುವವರಿಗೆ ಪೊಲೀಸ್ ಇಲಾಖೆ ಶಾಕ್ ನೀಡಿದೆ. ಇನ್ನುಂದೆ NDMA ಆ್ಯಕ್ಟ್ ಅಡಿಯಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

vehicle
vehicle

By

Published : Apr 1, 2020, 12:42 PM IST

ಬೆಂಗಳೂರು:ಬೇಕಾ ಬಿಟ್ಟಿ ಓಡಾಡುವ ವಾಹನ ಸವಾರರಿಗೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್ ರಾವ್ ಶಾಕಿಂಗ್ ನ್ಯೂಸ್​ ಕೊಟ್ಟಿದ್ದಾರೆ. ನಿಯಮ ಮೀರಿ ಓಡಾಡುವ ವಾಹನ ಸವಾರರಿಗೆ ಕೇಂದ್ರ ಸರ್ಕಾರದ NDMA ಆ್ಯಕ್ಟ್ (ರಾಷ್ಟ್ರೀಯ ವಿಪತ್ತು ವ್ಯವಸ್ಥಾಪಕ ಪ್ರಾಧಿಕಾರ) ಅಡಿ‌ಯಲ್ಲಿ ಶಿಕ್ಷೆ ಅಥವಾ ದಂಡ ಹಾಕಿ ಪ್ರಕರಣ ದಾಖಲಿಸಿ ವಾಹನ ಸೀಜ್ ಮಾಡುವ ವ್ಯವಸ್ಥೆಗೆ ಮುಂದಾಗಿದ್ದಾರೆ.

ಇದುವರೆಗೂ ನಗರಾದ್ಯಂತ 3151 ವಾಹನ ಜಪ್ತಿ ಯಾಗಿದ್ದು, ಅದರಲ್ಲಿ 2883 ಬೈಕ್​ಗಳು ,107 ಆಟೋಗಳು, ಹಾಗೂ 161 ಕಾರ್​ ಇದ್ದು, ಈ ವಾಹನ ಸವಾರರಿಗೆ NDMA ಆ್ಯಕ್ಟ್ ಅಡಿಯಲ್ಲಿ ಪೊಲೀಸರು ಶಾಕ್ ನೀಡಲಿದ್ದಾರೆ.

ಮತ್ತೊಂದೆಡೆ ಪೊಲೀಸರು ತಪಾಸಣೆ ಮಾಡುವಾಗ ಪೊಲೀಸ್ ಪಾಸ್ ದುರ್ಬಳಕೆ ಮಾಡುವ ವಿಚಾರ ಕೂಡ ಬಯಲಾಗಿದೆ. ಪೊಲೀಸ್ ಪಾಸ್​ಗಾಗಿ ಸುಮಾರು 10 ಲಕ್ಷದಷ್ಟು ಬೇಡಿಕೆಯಿದ್ದರೂ, ಅಳೆದು - ತೂಗಿ ಕೇವಲ 80 ಸಾವಿರದಿಂದ 1 ಲಕ್ಷದವರೆಗೆ ಮಾತ್ರ ಪಾಸ್ ವಿತರಣೆ ಮಾಡಲಾಗಿದೆ. ಅದರಲ್ಲೂ ಕೆಲವರು ಪೊಲೀಸ್ ಪಾಸ್ ಪಡೆದು ದುರ್ಬಳಕೆ ಮಾಡುತ್ತಿರುವ ವಿಚಾರ ನಗರ ಆಯುಕ್ತ ಭಾಸ್ಕರ್ ರಾವ್​ಗೆ ತಿಳಿದು ಈ ಬಗ್ಗೆ ತನಿಖೆ ನಡೆಸಲು ಆಯಾ ವಿಭಾಗದ ಡಿಸಿಪಿಗಳಿಗೆ‌ ಸೂಚಿಸಿದ್ದಾರೆ.

ABOUT THE AUTHOR

...view details