ಬೆಂಗಳೂರು : ಇಂದಿನಿಂದ ಅಧಿಕೃತವಾಗಿ 14 ದಿನಗಳ ಲಾಕ್ಡೌನ್ ಮುಂದುವರಿಕೆ ಹಿನ್ನೆಲೆ ವಾಹನ ನಿಯಂತ್ರಣಕ್ಕಾಗಿ ಪೊಲೀಸರು ವಿನಾಯಿತಿ ಅವಧಿ ಮುಗಿಯುತ್ತಿದ್ದಂತೆ ವಾಹನ ತಪಾಸಣೆ ಬಿಗಿಗೊಳಿಸಿದರೆ, ಇನ್ನೂ ಕೆಲವೆಡೆ ಪೊಲೀಸರಿಂದ ವಿನೂತನ ಪ್ರಯತ್ನ ನಡೆದವು.
ಅನಗತ್ಯ ವಾಹನ ಸಂಚಾರ ನಿಯಂತ್ರಿಸಬೇಕು. ವಿನಾಕಾರಣ ಓಡಾಟ ಮಾಡದ ರೀತಿ ಕಂಟ್ರೋಲ್ ತೆಗದುಕೊಳ್ಳಿ ಎಂದು ಪೊಲೀಸ್ ಹಿರಿಯ ಅಧಿಕಾರಿಗಳ ಆದೇಶದ ಹಿನ್ನೆಲೆ ಖಾಕಿ ಪಡೆ ಎಂದಿನಂತೆ ಇಂದೂ ಕೂಡ ಸಜ್ಜಾಗಿ ನಿಂತಿತ್ತು.
ಗುಲಾಬಿ ಹೂ ನೀಡಿ ವಾಹನ ಸೀಜ್ ಮಾಡಿದ ಪೀಣ್ಯ ಪೊಲೀಸರು ಲಾಠಿಚಾರ್ಜ್ ಬಿಟ್ಟು ಉಳಿದೆಲ್ಲಾ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದ ಬೆನ್ನಲ್ಲೇ ಇಂದು ಸಹ ನೂರಾರು ಸಂಖ್ಯೆಯಲ್ಲಿ ವಾಹನಗಳು ಜಪ್ತಿಯಾಗಿವೆ. ಉದ್ದೇಶವಿಲ್ಲದೆ ರಸ್ತೆಗಿಳಿದಿದ್ದವರನ್ನ ಮುಲಾಜಿಲ್ಲದೆ ಬಂಧನಕ್ಕೊಳಪಡಿಸಲಾಗಿದೆ.
ಗುಲಾಬಿ ಹೂ ನೀಡಿ ವಾಹನ ಸೀಜ್ :ಲಾಠಿಚಾರ್ಜ್ ಮಾಡಿದ್ದಾಯ್ತು, ಬಸ್ಕಿ ಹೊಡೆಸಿದ್ದಾಯ್ತು, ಪ್ರತಿಜ್ಞಾ ವಿಧಿ ಓದಿಸಿದ್ದೂ ಆಯ್ತು. ಯಾವುದಕ್ಕೂ ಬಗ್ಗದ ಕೆಲವರು ರಸ್ತೆಗಿಳಿಯುತ್ತಲೇ ಇದ್ದಾರೆ. ಹೀಗಾಗಿ, ಇಂದು ಮತ್ತೊಂದು ರೀತಿ ಮನವೊಲಿಸುವ ಕಾರ್ಯ ನಡೆಯಿತು.
ನಗರದ ಪೀಣ್ಯ ಪೊಲೀಸರು ಸೂಕ್ತ ದಾಖಲಾತಿಯಿಲ್ಲದೆ ರಸ್ತೆಗಿಳಿದು ಬಂದ ವಾಹನ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಅವರಿಗೆ ಬುದ್ಧಿ ಹೇಳಿ ಅವರ ವಾಹನ ಸೀಜ್ ಮಾಡಿದರು.
ನಿನ್ನೆ ಒಂದೇ ದಿನದಲ್ಲಿ 2000ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದರು. ಅದರಲ್ಲಿ ದ್ವಿಚಕ್ರವಾಹನಗಳ ಸಂಖ್ಯೆಯೇ ಹೆಚ್ಚಾಗಿತ್ತು. ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆಯಡಿ (ಎನ್ ಡಿಎಂಎ) 84 ಕೇಸ್ ದಾಖಲಾಗಿತ್ತು. ಈ ಹಿಂದೆ ವಾಹನಗಳಿಗೆ ದಂಡ ವಿಧಿಸಿ ಲಾಕ್ಡೌನ್ ಮುಗಿದ ಬಳಿಕ ದಂಡ ಪಾವತಿಸಿ ವಾಪಸ್ ಪಡೆಯಬಹುದಿತ್ತು.
ಆದರೆ, ಎನ್‌ಡಿಎಂಎ ಆ್ಯಕ್ಟ್ನ್ಲ್ಲಿಬಂಧಿಸಿದರೆ ಆ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ. ಎಂದಿಗೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತದ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಕೇಸ್ ಬಿದ್ದರೆ ಅದೊಂದು ಕಪ್ಪು ಚುಕ್ಕಿಯೇ ಸರಿ. ಅಷ್ಟಲ್ಲದೆ ಕೊರೊನಾ ಹರಡುವಿಕೆಯಲ್ಲಿ ಭಾಗಿಯಾಗಿರುವ ಕೇಸ್ಗಳು ಕೂಡ ಎನ್‌ಡಿಎಂಎ ಕಾಯ್ದೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:ಆಕ್ಸಿಜನ್ ಕಂಟೇನರ್ ಆಗಮಿಸಿದರೂ ಉಪಯೋಗಿಸಲಾಗ್ತಿಲ್ಲ.. ಇದೆಂಥಾ ವ್ಯವಸ್ಥೆ ಕಣ್ರೀ..