ಕರ್ನಾಟಕ

karnataka

ETV Bharat / state

ಟ್ರಾಫಿಕ್​​​ ಪೊಲೀಸ್​​​​ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ ಬೈಕ್​​ ಸವಾರ! - undefined

ಬ್ರಾಂಡ್ ಫ್ಯಾಕ್ಟರಿ ಜಂಕ್ಷನ್ ಬಳಿ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಠಾಣೆಯ ಪೊಲೀಸರು ಟ್ರಾಫಿಕ್ ಕ್ಲೀಯರ್ ಮಾಡುತ್ತಿದ್ದ ವೇಳೆ ಹೊಂಡಾ ಆಕ್ಟಿವಾದಲ್ಲಿ ಬಂದ ಸವಾರನೊಬ್ಬ ವೇಗವಾಗಿ ಸಿಗ್ನಲ್ ಬಿಟ್ಟಿಲ್ಲ ಎಂದು ಆರೋಪಿಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Bangalore

By

Published : Jul 15, 2019, 5:17 PM IST

ಬೆಂಗಳೂರು:ಹಾಡಹಗಲೇ ಟ್ರಾಫಿಕ್ ಪೊಲೀಸರ ಮೇಲೆ ಬೈಕ್​​ ಸವಾರನೊಬ್ಬ ಹಲ್ಲೆ ಮಾಡಿರುವ ಘಟನೆ ಲಕ್ಕಸಂದ್ರ ಬಳಿಯಿರುವ ಬ್ರಾಂಡ್ ಫ್ಯಾಕ್ಟರಿ ಜಂಕ್ಷನ್​ನಲ್ಲಿ ನಡೆದಿದೆ.

ಸುನೀಲ್​ ಹಲ್ಲೆಗೊಳಗಾದ ಪೇದೆ. ಇವರು ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೆಸಲ ನಿರ್ವಹಿಸುತ್ತಿದ್ದು, ಟ್ರಾಫಿಕ್ ಕ್ಲೀಯರ್ ಮಾಡುತ್ತಿದ್ದ ವೇಳೆ ಹೊಂಡಾ ಆಕ್ಟಿವಾದಲ್ಲಿ ಬಂದ ಸವಾರನೊಬ್ಬ ವೇಗವಾಗಿ ಸಿಗ್ನಲ್ ಬಿಟ್ಟಿಲ್ಲ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ.

ಟ್ರಾಫಿಕ್​ ಪೊಲೀಸ್​ ಮೇಲೆ ಹಲ್ಲೆ ಮಾಡಿದ ವಾಹನ ಸವಾರ

ಹಲ್ಲೆ ನಡೆದದ್ದನ್ನು ಗಮನಿಸಿದ ಇತರೆ ಪೊಲೀಸರು ಬಂದು ಆತನನ್ನು ಠಾಣೆಗೆ ಕರೆದೊಯ್ಯಲು ಪ್ರಯತ್ನಿಸುವ ಸಂದರ್ಭದಲ್ಲಿ ಕೆಲವರು ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ. ಪೊಲೀಸರಿಗೆ ಸದಾ ಇದೇ ರೀತಿ ಹಿಂಸೆ ನೀಡುತ್ತಾರೆ ಎಂದು ಸುತ್ತಮುತ್ತಲಿನ ಜನ ಆರೋಪಿಸಿದ್ದಾರೆ.

ತಪ್ಪು ಯಾರದೆಂದು ತಿಳಿಯದೆ ಜನರು ಪೊಲೀಸರು ಎಂಬುದನ್ನು ಲೆಕ್ಕಿಸದೆ ನಡು ರಸ್ತೆಯಲ್ಲೇ ಹಲ್ಲೆಗೆ ಮುಂದಾಗಿದ್ದಾರೆ. ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೇದೆ ಸುನಿಲ್ ದೂರು ಸಲ್ಲಿಸಿದ್ದು, ಹಲ್ಲೆ ಮಾಡಲು ಮುಂದಾದವರ ಭಾವಚಿತ್ರ, ವಿಡಿಯೋಗಳನ್ನು ಆಧರಿಸಿ ಶಿಕ್ಷೆ ನೀಡಬೇಕು ಎಂದು ಜನ ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details