ಕರ್ನಾಟಕ

karnataka

ETV Bharat / state

ಸಿಸಿಬಿ ಕಚೇರಿಗೆ ದೌಡಾಯಿಸಿದ ವಿರೇನ್ ಖನ್ನಾ ಪೋಷಕರು - ಸಿಸಿಬಿ ಕಚೇರಿ

ವಿರೇನ್​ ಖನ್ನಾ ಪೋಷಕರು ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದು, ಸಿಸಿಬಿ ಅಧಿಕಾರಿಗಳು ಖನ್ನಾ ಚಲನವಲನಗಳ ಬಗ್ಗೆ ಪೋಷಕರಿಂದ ಮಾಹಿತಿ ಪಡೆಯುವ ಸಾಧ್ಯತೆ ಇದೆ.

Veeren khanna parents
ವಿರೇನ್ ಖನ್ನಾ ಪೋಷಕರು

By

Published : Sep 12, 2020, 3:12 PM IST

ಬೆಂಗಳೂರು: ಕಳೆದ ಒಂದು ವಾರದಿಂದ ಹೈಫೈ ಪಾರ್ಟಿ ಆಯೋಜಕ ವಿರೇನ್ ಖನ್ನಾ ಸಿಸಿಬಿ ಬಂಧನದಲ್ಲಿದ್ದು, ಆತನ ಪೋಷಕರು ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.

ಸಿಸಿಬಿ ಕಚೇರಿಗೆ ಬಂದ ವಿರೇನ್ ಖನ್ನಾ ಪೋಷಕರು

ಇದೇ ವೇಳೆ ಮಾತನಾಡಿರುವ ಖನ್ನಾ ಪೋಷಕರು, ನನ್ನ ಮಗನಿಗೂ ಡ್ರಗ್ಸ್​​​ ಮಾಫಿಯಾಗೂ ಸಂಬಂಧ ಇಲ್ಲ. ಅವನು ನಿರಪರಾಧಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಿಸಿಬಿ ಅಧಿಕಾರಿಗಳು ಖನ್ನಾ ಮನೆ ಮೇಲೆ ದಾಳಿ ಮಾಡಿದಾಗ ಕೆಲವು ವಸ್ತುಗಳು ಸಿಕ್ಕಿದ್ದವು. ಅಲ್ಲದೆ ಸಿಸಿಬಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದ ವೇಳೆ ವಿರೇನ್ ಖನ್ನಾ ಪೋಷಕರು ವಿರೋಧ ವ್ಯಕ್ತಪಡಿಸಿದ್ರು.

ಸದ್ಯ ಖನ್ನಾ ಸಿಸಿಬಿ ಬಂಧನದಲ್ಲಿದ್ದು, ಖನ್ನಾ ಪೋಷಕರು ಸಿಸಿಬಿ ಅಧಿಕಾರಿಗಳಿಗೆ ಮಗನ ಬಗ್ಗೆ ಮಾಹಿತಿ ನೀಡಲಿದ್ದಾರೆ. ಖನ್ನಾ ಚಲನವಲನಗಳ ಬಗ್ಗೆ ಪೋಷಕರಿಂದ ಸಿಸಿಬಿ ಮಾಹಿತಿ ಪಡೆಯುವ ಸಾಧ್ಯತೆ ಇದೆ.

ABOUT THE AUTHOR

...view details