ಬೆಂಗಳೂರು : ಪಶುವೈದ್ಯೆ ಮೇಲೆ ಅತ್ಯಾಚಾರಗೈದು ಅಮಾನವೀಯವಾಗಿ ಕೊಲೆಗೈದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿರುವ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಕಾರ್ಯವನ್ನು ಅಖಿಲಭಾರತ ವೀರಶೈವ ಮಹಾಸಭಾದ ಯುವ ಘಟಕದ ಮಾಜಿ ಅಧ್ಯಕ್ಷ ಉಮೇಶ್ ಪಾಟೀಲ್ ಶ್ಲಾಘಿಸಿದ್ದಾರೆ.
ಪೊಲೀಸ್ ಆಯುಕ್ತ ಸಜ್ಜನರಗೆ ವೀರಶೈವ ಮಹಾಸಭೆ ಅಭಿನಂದನೆ - Latest News For Veerashaiva Mahaasabha
ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಕಾರ್ಯವನ್ನು ಅಖಿಲಭಾರತ ವೀರಶೈವ ಮಹಾಸಭೆ ಯುವ ಘಟಕದ ಮಾಜಿ ಅಧ್ಯಕ್ಷ ಉಮೇಶ್ ಪಾಟೀಲ್ ಶ್ಲಾಘಿಸಿದ್ದಾರೆ.
ಎನ್‌ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ್
ತೆಲಂಗಾಣದಲ್ಲಿ ಎನ್‌ಕೌಂಟರ್ ಸ್ಪೆಷೆಲಿಸ್ಟ್ ಎಂದೇ ಖ್ಯಾತರಾಗಿರುವ ವಿಶ್ವನಾಥ್ ಸಜ್ಜನರ ಹುಬ್ಬಳ್ಳಿಯವರು ಎನ್ನುವುದು ನಮ್ಮ ಹೆಮ್ಮೆಯನ್ನು ಹೆಚ್ಚಿಸುವಂತೆ ಮಾಡಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣದ ಆರೋಪಿಗಳಿಗೆ ಒಂದೇ ವಾರದಲ್ಲಿ ದೇಶದ ಜನರು ಬಯಸುವ ಶಿಕ್ಷೆ ನೀಡುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಅಭಿನಂದನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.