ಕರ್ನಾಟಕ

karnataka

ETV Bharat / state

ಎಲ್ಲ ಬಗೆಯ ಇಎಂಐ ಕಟ್ಟಲು ಜೂನ್ 30 ವರೆಗೆ ವಿನಾಯ್ತಿ ನೀಡಿ : ಪಿಎಂ, ಸಿಎಂಗೆ ವೀರಶೈವ ಮಹಾಸಭೆ ಮನವಿ - ಸಿಎಂಗೆ ವೀರಶೈವ ಮಹಾಸಭೆ ಮನವಿ

ದೇಶದ ಮಧ್ಯಮ ವರ್ಗ, ಕೆಳ, ಮಧ್ಯಮ ಹಾಗೂ ಬಡವರು, ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿರುವ ಸಾಲದ ಕಂತು (ಇಎಂಐ) ಮರು ಪಾವತಿಗೆ ಜೂನ್ 30 ರ ವರೆಗೆ ಮುಂದೂಡುವಂತೆ ಪತ್ರದಲ್ಲಿ ಮನವಿ.

veerashaiva-mahasabh
ಸಿಎಂಗೆ ವೀರಶೈವ ಮಹಾಸಭೆ ಮನವಿ

By

Published : Mar 26, 2020, 12:45 PM IST

ಬೆಂಗಳೂರು :ಇಎಂಐ ಕಟ್ಟಲು ಜೂನ್ 30 ವರೆಗೆ ವಿನಾಯ್ತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭೆಯ ಕೈಗಾರಿಕೆ ಹಾಗೂ ವಾಣಿಜ್ಯ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಉಮೇಶ್ ಪಾಟೀಲ್ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಪಿಎಂಗೆ ವೀರಶೈವ ಮಹಾಸಭೆ ಮನವಿ
ಸಿಎಂಗೆ ವೀರಶೈವ ಮಹಾಸಭೆ ಮನವಿ

ಕೊರೊನಾ ವೈರಸ್ ದಾಳಿಯಿಂದ ದೇಶದ ಜನರನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳು ಶ್ಲಾಘನೀಯ. ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜನತಾ ಕರ್ಪ್ಯೂ ಅಂತ ಜಾಗೃತಿ ಕಾರ್ಯಕ್ರಮಕ್ಕೆ ಅಭಿನಂದನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನರು ಮಾರ್ಚ್ 31 ರ ಒಳಗೆ ಪಾವತಿ ಮಾಡಬೇಕಿದ್ದ ಆದಾಯ ತೆರಿಗೆಯನ್ನು ಕಟ್ಟಲು ಜೂನ್ 30 ರ ವರೆಗೆ ಅವಧಿ ವಿಸ್ತರಣೆ ಮಾಡಿರುವುದು ಸಾಮಾನ್ಯ ಜನರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಶ್ಲಾಘನೀಯ ಅದರಂತೆ ದೇಶದ ಮಧ್ಯಮ ವರ್ಗ, ಕೆಳ ಮಧ್ಯಮ ಹಾಗೂ ಬಡವರು, ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿರುವ ಸಾಲದ ಕಂತು (ಇಎಂಐ) ಮರು ಪಾವತಿಗೆ ಜೂನ್ 30 ರ ವರೆಗೆ ಮುಂದೂಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details