ಬೆಂಗಳೂರು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾವ ಮಂಡಿಸಿ ಅಂಗೀಕಾರವನ್ನೂ ಪಡೆದಿದೆ. ಹೀಗಾಗಿ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ. ಈ ಹಠಾತ್ ನಿರ್ಧಾರವು ಇದೀಗ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
370 ಕಲಂ ರದ್ದತಿ ಮೂಲಕ ರಾಜಕೀಯ ಪ್ರಳಯ ಮಾಡಲು ಹೊರಟಿದೆ: ಈಟಿವಿ ಭಾರತಕ್ಕೆ ಮೊಯ್ಲಿ ಪ್ರತಿಕ್ರಿಯೆ - chitchat with veerappa moily
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿ ಪಾಸ್ ಸಹ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ ಈಟಿವಿ ಭಾರತ್ ನಡೆಸಿದ ಚಿಟ್ ಚಾಟ್ ನಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿರುವುದು ಒಂದು ರೀತಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. 2016 ರಲ್ಲೂ ನೋಟ್ ಬ್ಯಾನ್ ನಿಷೇಧಿಸಿದಾಗಲೂ ಯಾವುದೇ ಚರ್ಚೆ ನಡೆಸದೇ ನಿರ್ಧಾರ ಕೈಗೊಂಡಿತ್ತು.
ಈ ನಿರ್ಧಾರದಿಂದ ಲಕ್ಷಾಂತರ ಜನರು ನಿರುದ್ಯೋಗಿಗಳಾಗುವ ಮೂಲಕ ಹಣಕಾಸು ವ್ಯವಸ್ಥೆಯಲ್ಲಿ ಪ್ರಳಯ ಉಂಟು ಮಾಡಿತ್ತು. ಇದೀಗ 370 ಕಲಂ ರದ್ದುಗೊಳಿಸುವ ತೀರ್ಮಾನ ಮೂಲಕ ರಾಜಕೀಯ ಪ್ರಳಯ ಸೃಷ್ಟಿಸಿದೆ. ಈ ಬಗ್ಗೆ ಇನ್ನಷ್ಟು ವಿಚಾರಗಳ ಬಗ್ಗೆ ನಮ್ಮ ಪ್ರತಿನಿಧಿ ಜೊತೆಗೆ ಮಾಜಿ ಕಾನೂನು ಸಚಿವರೂ ಆಗಿರುವ ವೀರಪ್ಪ ಮೊಯ್ಲಿ ಮಾತನಾಡಿದ್ದಾರೆ.