ಕರ್ನಾಟಕ

karnataka

ETV Bharat / state

ಇಂಗ್ಲಿಷ್​​ ನಾಮಫಲಕ ಅಳವಡಿಕೆ: ಅಂಗಡಿ ಮಾಲೀಕರ ವಿರುದ್ದ ವಾಟಾಳ್ ನಾಗರಾಜ್ ಆಕ್ರೋಶ

ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದೇ ಅಂಗಡಿ ಮುಂಗಟ್ಟುಗಳು ಇಂಗ್ಲಿಷ್​ ಬೋರ್ಡ್ ಹಾಕಿ ಕಾನೂನನ್ನು ಗಾಳಿಗೆ ತೂರಿವೆ. ಆದ್ರೆ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದ ವ್ಯಾಪಾರಸ್ಥರಿಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

Vatal Nagraj protest in Banglore
ಇಂಗ್ಲೀಷ್ ನಾಮಫಲಗಳ ಪೀಸ್ ಪೀಸ್ ಮಾಡಿದ ವಾಟಾಳ್

By

Published : Feb 29, 2020, 8:28 PM IST

ಬೆಂಗಳೂರು: ನಗರದ ಬ್ರೀಗೇಡ್ ಹಾಗೂ ಎಂಜಿ ರಸ್ತೆ ಬದಿಯ ಶಾಪ್​ಗಳಲ್ಲಿ ಆಂಗ್ಲ ಭಾಷೆಯ ನಾಮಫಲಕಗಳನ್ನು ಹಾಕಿಕೊಂಡಿರುವ ಮಾಲೀಕರ ವಿರುದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗಡಿ ಮಾಲೀಕರ ವಿರುದ್ದ ವಾಟಾಳ್ ನಾಗರಾಜ್ ಆಕ್ರೋಶ

ಇತ್ತೀಚಿಗೆ ಬಿಬಿಎಂಪಿ ಕೂಡ ಎಲ್ಲ ಅಂಗಡಿಗಳಲ್ಲಿ ಕನ್ನಡ ನಾಮಫಲ ಕಡ್ಡಾಯವಾಗಿರಬೇಕು ಎಂದು ಸೂಚನೆ ನೀಡಿತ್ತು. ಆದರೆ, ನಗರದ ಬ್ರಿಗೇಡ್​ ಹಾಗೂ ಎಂಜಿ ರಸ್ತೆಯ
ಶಾಪ್​ಗಳ ಮಾಲೀಕರು ಇದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಇದರ ವಿರುದ್ದ ಆಕ್ರೋಶಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ಹೋಗಿ ಇಂಗ್ಲಿಷ್​​ ಭಾಷೆಯ ನಾಮಫಲಕಗಳನ್ನು ಧ್ವಂಸ ಮಾಡಿ ಅಂಗಡಿ ಮಾಲೀಕರ ವಿರುದ್ದ ಗುಡುಗಿದ್ದಾರೆ. ರಾಜಭವನ‌ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್​ನ ಬೋರ್ಡ್ ಹಾಗೂ ಬ್ರಿಗೇಡ್ ಟವರ್ ನಾಮಫಲಕ ಒಡೆದು ಹಾಕಿದ್ದಾರೆ. ಅಲ್ಲದೇ ಆಂಗ್ಲ ಭಾಷೆಯಲ್ಲಿದ್ದ ಬೋರ್ಡ್​ಗಳಿಗೆ ಕಪ್ಪು ಮಸಿ ಬಳಿದಿದ್ಧಾರೆ.

ಅಲ್ಲದೇ ಕನ್ನಡ ನಾಮಫಲಕ ಹಾಕಿದ ಶಾಪ್ ಮಾಲೀಕರ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ABOUT THE AUTHOR

...view details