ಬೆಂಗಳೂರು : ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಬೆಂಗಳೂರಿನ ಲಾಲ್ ಬಾಗ್ ಮುಖ್ಯ ದ್ವಾರದಿಂದ ತೆರೆದ ಜೀಪಿನಲ್ಲಿ ಪ್ರಚಾರ ಆರಂಭಿಸಿದರು.
ತಮ್ಮ ಗುರುತಾದ ಚಪ್ಪಲಿಯನ್ನು ಪ್ರದರ್ಶಿಸುವ ಮೂಲಕ ತಮಗೆ ಮತ ನೀಡುವಂತೆ ಕೋರಿದರು.
ಚಪ್ಪಲಿ ಹಿಡಿದು ಪ್ರಚಾರ ಆರಂಭಿಸಿದ ವಾಟಾಳ್
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಪ್ರಜಾಪ್ರಭುತ್ವದ ಆಧಾರದ ಮೇಲೆ ಪ್ರಾಮಾಣಿಕವಾಗಿ ಚುನಾವಣೆ ನಡೆಯಬೇಕು ಚುನಾವಣೆಯಲ್ಲಿ ಯಾವುದೇ ಲೋಪವನ್ನು ಮಾಡದೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡದೆ ಚುನಾವಣೆ ನಡೆಸಬೇಕು ಎಂಬುದು ತಮ್ಮ ಬಯಕೆ. ಈ ಬಗ್ಗೆ ಅರಿವು ಮೂಡಿಸುವುದು ನನ್ನ ಕರ್ತವ್ಯವಾಗಿದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು.

ಲಾಲ್ ಬಾಗ್ ಮುಖ್ಯ ದ್ವಾರದಿಂದ ಟೀಚರ್ಸ್ ಕಾಲೇಜು, ಸೌತ್ ಎಂಡ್ , ಜಯನಗರ ಮೂರನೇ ಬ್ಲಾಕ್, 4 ನೇ ಬ್ಲಾಕ್, 9ನೇ ಬ್ಲಾಕ್ ಹಾಗೂ ರಾಗಿಗುಡ್ಡದ ಮೂಲಕ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು.