ಆನೇಕಲ್ (ಬೆಂ.ನ): ತಮಿಳುನಾಡಿನಲ್ಲಿನ ಕಾಮಗಾರಿಗಳಿಗೆ ರಾಜಕೀಯ ಪ್ರೇರಿತವಾಗಿ ಕೇಂದ್ರದ ಅನುದಾನ ಸಿಗುತ್ತಿದೆ. ಜಯಲಲಿತಾರ ಅನುಗ್ರಹದಿಂದ ಬೆಳೆದವರೇ ಅವರ ಸಿದ್ಧಾಂತಗಳನ್ನ ತುಳಿದು ಇಂದು ಕೇಂದ್ರದ ಕೈಗೊಂಬೆಯಂತೆ ತಮಿಳುನಾಡಿನ ರಾಜಕೀಯ ಚಿತ್ರಣ ಮೈತಳೆದಿದೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ರಾಜ್ಯದ ಆಶಯಗಳಿಗೆ ತಣ್ಣೀರೆರಚಿ ತಮಿಳುನಾಡಿನತ್ತ ಕೇಂದ್ರದ ಚಿತ್ತ ವಾಲುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದು, ರಾಜ್ಯದ ಹಿತ ಕಾಪಾಡುವಲ್ಲಿ ಸೋತಿದೆ. ಮುಖ್ಯಮಂತ್ರಿ-ಗೃಹ ಮಂತ್ರಿ ಒಳಗೊಂಡಂತೆ ಎಲ್ಲರೂ ಕೈಲಾಗದವರು ಎಂದು ಟೀಕಿಸಿದರು.