ಬೆಂಗಳೂರು: ಗಡಿಯಲ್ಲಿ ಮಹಾರಾಷ್ಟ್ರದ ಸಚಿವರಾದ ಪಾಟೀಲ್, ದೇಸಾಯಿ ಅವರನ್ನು ಬಂಧನ ಮಾಡಿ. ಅವರನ್ನು ಕರ್ನಾಟಕಕ್ಕೆ ಬರಲು ಬಿಡಬೇಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮಂತ್ರಿಗಳಾದ ಪಾಟೀಲ್, ದೇಸಾಯಿ, MES ನವರು ಕರೆದಿದ್ದಾರೆ ಮಾತನಾಡಲು ಬರುತ್ತೇವೆ ಎಂದು ಹೇಳಿದ್ದಾರೆ. ಅವರನ್ನು ಬೆಳಗಾವಿ ಜೈಲಿನಲ್ಲಿ ಇಡಿ ಎಂದು ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಗಡಿನಾಡಿನ ಸಮಸ್ಯೆ ಬಹಳ ಗಂಭೀರವಾಗಿದೆ. ಮಹಾರಾಷ್ಟ್ರ ಸರ್ಕಾರದವರು ಉದ್ದೇಶಪೂರ್ವಕವಾಗಿ ದಾಳಿ ಮಾಡುತ್ತಿದ್ದಾರೆ. ಬಾಳಾ ಠಾಕ್ರೆ ಇದ್ದಾಗ ಆಮೇಲೆ, ಶಿಂಧೆ, ಫಡ್ನವಿಸ್ ಕರ್ನಾಟಕ ಮೇಲೆ ಕೆಟ್ಟ ದಾಳಿ ಮಾಡುತ್ತಿದ್ದಾರೆ. ಕರ್ನಾಟಕದ ಮೇಲೆ ಇದೊಂದು ರಾಜಕೀಯ ಧೋರಣೆ. ರಾಜ್ಯ ಪುನರ್ ವಿಂಗಡಣೆ ಕಾಲದಿಂದಲೂ ಬೆಳಗಾವಿ, ಕಾರವಾರ, ನಿಪ್ಪಾಣಿ ಹಳ್ಳಿಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಅವರು ಸ್ಪಷ್ಟಪಡಿಸಿದರು.
ಇಂದಿರಾಗಾಂಧಿ ಅವರಿಂದ ಮಹಾಜನ್ ಆಯೋಗ ರಚನೆ :ವೈವಿ ಚೌಹಾಣ್ ಗೃಹ ಮಂತ್ರಿಯಾಗಿದ್ದಾಗ ಮಹಾಜನ್ ವರದಿ ನೇಮಕ ಆಗಿದೆ. ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಒಂದು ತೀರ್ಮಾನಕ್ಕೆ ಬಂದರು. ಮೊದಲು ನಾವು ಯಾವುದೇ ಆಯೋಗಕ್ಕೆ ಒಪ್ಪಿರಲಿಲ್ಲ. ಮಹಾರಾಷ್ಟ್ರ ದವರು ಒತ್ತಾಯಿಸಿದ್ರು, ಆದರೆ, ನಮ್ಮ ರಾಜ್ಯ ಆಯೋಗಕ್ಕೆ ತೀವ್ರವಾಗಿ ವಿರೋಧಿಸಿತು.