ಬೆಂಗಳೂರು: ಇದೇನು ಕಡ್ಲೇಪುರಿ ವ್ಯಾಪಾರನಾ? ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಹಾರಾಷ್ಟ್ರ ಗಡಿ ಕ್ಯಾತೆ ವಿಚಾರವಾಗಿ ಉಭಯ ರಾಜ್ಯಗಳ ಸಚಿವರ ಸಮಿತಿ ರಚನೆಯನ್ನು ಟೀಕಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಗಡಿ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಧಾನ ಸಭೆಯಲ್ಲಿ ಸಚಿವರ ಸಮಿತಿ ನೇಮಿಸಿರುವುದನ್ನು ಖಂಡಿಸಿದರು.
ಈ ಸಭೆ ಸಂಪೂರ್ಣ ವಿಫಲವಾಗಿದೆ. ಮೂರು ಮೂರು ಸಚಿವರನ್ನು ಸಮಿತಿಗೆ ನೇಮಕ ಮಾಡಿದ್ದೀರಿ. ಬೊಮ್ಮಾಯಿ ಅವರಿಗೆ ಅರ್ಥ ಆಗಿಲ್ಲ ಅನ್ನಿಸುತ್ತೆ. ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಅರ್ಜಿ ಚರ್ಚೆಗೆ ಬಂದಿಲ್ಲ. ಸುಪ್ರೀಂ ತೀರ್ಪು ಬರುವವರೆಗೂ ಕಾಯಿರಿ ಅಂತಾರೆ. ಕೇಂದ್ರ ಸರ್ಕಾರದ ನಿಲುವೇನು? ಎಂದು ಕಿಡಿಕಾರಿದರು.