ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದಾರೆ. ಇದರಿಂದ ಪ್ರಯೋಜನವಿಲ್ಲ. ರಾತ್ರಿ 10 ರಿಂದ ಬೆಳಗಿನ ಜಾವ 5ರ ವರೆಗೆ ಯಾವುದೇ ಅನುಕೂಲ ಇಲ್ಲ ಎಂದರು.
ಬಾರಿ ವಿಶೇಷ ಸಂದರ್ಭಗಳಲ್ಲಿ ಕರ್ಫ್ಯೂ ಹಾಗೂ 144 ಸಕ್ಷನ್ ಜಾರಿ ಮಾಡಲಾಗುತ್ತದೆ. ಸರ್ಕಾರಕ್ಕೆ ಒಂದು ರೀತಿಯಲ್ಲಿ ಹುಡುಗಾಟಿಕೆಯಾಗಿದೆ ಎಂದು ಕಿಡಿಕಾರಿದರು.
ಬಿಜೆಪಿ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕೊರೊನಾ ಸೋಂಕು ತಡೆಯಲು ಬೇರೆ ಮಾರ್ಗ ಇಲ್ಲವೇ?. ಆಸ್ಪತ್ರೆ, ಹಾಸಿಗೆ, ವೆಂಟಿಲೇಟರ್ ರೆಡಿ ಇರಬೇಕು. ಅದನ್ನು ಬಿಟ್ಟು ರಾತ್ರಿ ಕರ್ಫ್ಯೂ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪಗೆ ಖಂಡಿತ ಬುದ್ದಿ ಇಲ್ಲ, ಮಾಡಿದ್ದೇ ಸರಿ, ಹೇಳಿದ್ದೇ ಸರಿ ಎಂಬಂತಾಗಿದೆ. ಯಡಿಯೂರಪ್ಪ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ಗುಡುಗಿದ್ದಾರೆ.
ರಾತ್ರಿ ಕರ್ಫ್ಯೂ ಜಾರಿ ಮಾಡುವ ಮುನ್ನ ಯಾರನ್ನು ಕರೆದು ಸಭೆ ಮಾಡಿ, ಕರ್ಪ್ಯೂ ಜಾರಿ ಮಾಡಿದ್ರಿ? ಮೊದಲು ಆಸ್ಪತ್ರೆ ಸುಧಾರಣೆ ಮಾಡಿ, ಅಲ್ಲಿಯವರೆಗೂ ಕರ್ಫ್ಯೂ ಜಾರಿ ಮಾಡಬೇಡಿ ಎಂದು ಒತ್ತಾಯಿಸಿದರು.
ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿ ಏನಾಗ್ತಿದೆ? ಚುನಾವಣಾ ಪ್ರಚಾರದಲ್ಲಿ ಸಚಿವರು, ಶಾಸಕರು ಮಾಸ್ಕ್ ಹಾಕುತ್ತಿಲ್ಲ ಎಂದು ದೂರಿದರು. ಇನ್ನು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸರ್ಕಾರ ಯಾವುದೇ ಚಿಂತನೆ ಮಾಡಿಲ್ಲ. ಮೊದಲು ಕಾರ್ಮಿಕ ಮುಖಂಡರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿ ಎಂದು ವಾಟಾಳ್ ಒತ್ತಾಯ ಮಾಡಿದರು.
ಇದನ್ನೂ ಓದಿ: ಮನವಿ ಸಲ್ಲಿಸಲು ಹೋದ ಯುವಕನಿಗೂ ಒಲಿದು ಬಂತು ರಾಜ್ಯ ಮಟ್ಟದ ಪ್ರಶಸ್ತಿ!