ಕರ್ನಾಟಕ

karnataka

ETV Bharat / state

ಮಾರ್ವಾಡಿ ಮೇಯರ್​ಗೆ ಧಿಕ್ಕಾರ ಎಂದ ವಾಟಾಳ್​ ನಾಗರಾಜ್​..!! - vatal nagaraj protest at bbmp office

ಬಿಬಿಎಂಪಿ ನೂತನ ಮೇಯರ್​ ಆಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಗೌತಮ್ ವಿರುದ್ಧ ವಾಟಾಳ್ ನಾಗರಾಜ್​ ಪ್ರತಿಭಟನೆ ನಡೆಸಿದ್ದಾರೆ.

ವಾಟಾಳ್​ ನಾಗರಾಜ್

By

Published : Oct 1, 2019, 1:39 PM IST

ಬೆಂಗಳೂರು : ಬಿಜೆಪಿ ಮೇಯರ್ ಅಭ್ಯರ್ಥಿ ಗೌತಮ್ ಆಯ್ಕೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆವರಣಕ್ಕೆ ಆಗಮಿಸಿ ವಾಟಾಳ್ ನಾಗರಾಜ್​ ಪ್ರತಿಭಟನೆ ನಡೆಸಿದರು.

ಮಾರ್ವಾಡಿ ಮೇಯರ್​ಗೆ ಧಿಕ್ಕಾರ ಎಂದ ವಾಟಾಳ್​ ನಾಗರಾಜ್

ಕರ್ನಾಟಕದ ರಾಜಧಾನಿ ಬೆಂಗಳೂರು ಈಗ ತಮಿಳು, ತೆಲುಗು , ಮಾರ್ವಾಡಿಗಳ ಕೈಗೆ ಹೋಗುತ್ತಿದೆ. ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಮೇಯರ್ ಅಚ್ಚ ಕನ್ನಡಿಗರು ಆಗಬೇಕು ಬೆಂಗಳೂರಿನ ಹಿತದೃಷ್ಟಿಯಿಂದ ಈ ಬೆಳವಣಿಗೆ ಸರಿಯಲ್ಲ, ಕನ್ನಡ ಒಕ್ಕೂಟ ದಿಂದ ಮೇಯರ್ ಮಾರವಾಡಿಗಳು ಆಗಿರುವುದನ್ನ ತೀವ್ರವಾಗಿ ಖಂಡಿಸುತ್ತೇವೆ. ಮಾರವಾಡಿ ಮೇಯರ್ ಗೆ ಧಿಕ್ಕಾರ ಧಿಕ್ಕಾರ ಎಂದು ಕೂಗಿ ಬಿಬಿಎಂಪಿ ಕಚೇರಿ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಬಿಜೆಪಿಗೂ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಬಿಬಿಎಂಪಿ ಕಚೇರಿ ಬಳಿ 144 ಸೆಕ್ಷನ್ ಇದ್ದ ಕಾರಣ ವಾಟಾಳ್ ನಾಗರಾಜ್ ಅವರನ್ನ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು.

ABOUT THE AUTHOR

...view details