ಕರ್ನಾಟಕ

karnataka

ETV Bharat / state

ತಾಕತ್ತಿದ್ದರೆ ಡಿಸೆಂಬರ್ 5ರ ಕರ್ನಾಟಕ ಬಂದ್​ ನಿಲ್ಲಿಸಿ : ಸಿಎಂಗೆ ವಾಟಾಳ್​ ಸವಾಲ್​ - ಡಿಸೆಂಬರ್ 5 ಕರ್ನಾಟಕ ಬಂದ್​

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ವಿರೋಧಿಸಿ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆ.ಆರ್ ಪುರದ ಐಟಿಐ ಬಸ್ ನಿಲ್ದಾಣದಿಂದ ಬಿಬಿಎಂಪಿ ಕಚೇರಿ ವರೆಗೂ ತೆರದ ವಾಹನದಲ್ಲಿ‌ ಪ್ರತಿಭಟನಾ ರ್ಯಾಲಿ ನಡೆಸಿದರು.

Vatal Nagaraj
ವಾಟಾಳ್ ನಾಗರಾಜ್

By

Published : Nov 28, 2020, 4:14 PM IST

Updated : Nov 28, 2020, 4:23 PM IST

ಕೆ.ಆರ್ ಪುರ:ಡಿಸೆಂಬರ್ 5ರ ಕರ್ನಾಟಕ ಬಂದ್​ ಅನ್ನು ತಾಕತ್ತಿದ್ದಿರೆ ನಿಲ್ಲಿಸಿ ಎಂದು‌ ಸಿಎಂ ಯಡಿಯೂರಪ್ಪಗೆ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ವಿರೋಧಿಸಿ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೂರಾರು ಜನ‌ ಕನ್ನಡ ಪರ ಹೋರಾಟಗಾರರು ಕೆ.ಆರ್ ಪುರದ ಐಟಿಐ ಬಸ್ ನಿಲ್ದಾಣದಿಂದ ಬಿಬಿಎಂಪಿ ಕಚೇರಿ ವರೆಗೂ ತೆರದ ವಾಹನದಲ್ಲಿ‌ ಪ್ರತಿಭಟನಾ ರ್ಯಾಲಿ ನಡೆಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್

ಬಿಬಿಎಂಪಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ ತಡೆದಿದ್ದ ವಾಟಾಳ್ ನಾಗರಾಜ್ ಹಾಗೂ ಪ್ರತಿಭಟನಾಕಾರರನ್ನು ಬಂಧಿಸಿದರು. ಪೋಲಿಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದ್ ಬಸ್ತ್​ ಆಯೋಜಿಸಲಾಗಿತ್ತು. ಹೆದ್ದಾರಿ ತಡೆದಿದ್ದರಿಂದ ಕೆಲಕಾಲ ಹೆದ್ದಾರಿಯ ಎರಡೂ ಕಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು .

ಬಂಧನಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 5 ಕರ್ನಾಟಕ ಬಂದ್ ನಡೆಯುತ್ತದೆ ತಾಕತ್ತಿದ್ದಿರೆ ಬಂದ್ ನಿಲ್ಲಿಸಿ ಎಂದು‌ ಮುಖ್ಯಮಂತ್ರಿ ಯಡಿಯೂರಪ್ಪಗೆ ಸವಾಲು ಹಾಕಿದರು, ಇದುವರೆಗೂ ನಡೆಯದ ರೀತಿಯಲ್ಲಿ ಬಂದ್ ನಡೆಯತ್ತದೆ, ಸಿನಿಮಾ ಆಟೋ ರಿಕ್ಷಾ, ಹೋಟೆಲ್ ಅಂಗಡಿ ಮುಂಗಟ್ಟು ಖಾಸಗಿ ಶಾಲಾ ಕಾಲೇಜುಗಳು ಎಲ್ಲಾ ಸಂಪೂರ್ಣ ಬಂದ್ ಆಗಿರುತ್ತದೆ, ಬಂದ್​ಗೆ 1,400 ಕನ್ನಡ ಪರ ಸಂಘಟನೆಗಳ ಬೆಂಬಲ ಸೂಚಿಸಿದ್ದಾರೆ. ಮನೆಯಿಂದ ಯಾರು ಹೊರಗೆ ಬರಬೇಡಿ ಎಂದು ಮನವಿ ಮಾಡಿದರು.

ಕನ್ನಡವನ್ನು ಹಾಳು ಮಾಡುವ ರಾಜ್ಯದ ನಂ.1 ಮುಖ್ಯಮಂತ್ರಿ ಯಡಿಯೂರಪ್ಪ, ಯಾವ ಜಾತಿಯವರು ಅವರನ್ನು ನಂಬಬೇಡಿ, ತಿರುವಳ್ಳುವರ್ ಪ್ರತಿಮೆ ತಂದು‌ ತಮಿಳರ ಪರವಾಗಿ ನಿಂತಿರುವ ಅವರು ಈಗ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವ ಮೂಲಕ ಮರಾಠಿ ಭಾಷಿಕರ ಪರವಾಗಿ ನಿಂತಿದ್ದಾರೆ. ಯಡಿಯೂರಪ್ಪ‌ ಮುಖ್ಯಮಂತ್ರಿಯಾಗಿ‌ ಮುಂದುವರಿದರೆ ಬೆಳಗಾವಿ ಸುವರ್ಣ ಸೌಧ ಮಹಾರಾಷ್ಟ್ರ ಕ್ಕೆ ಮಾರಾಟ ಮಾಡುತ್ತಾರೆ ಕಾರವಾರ, ನಿಪ್ಪಾಣಿಗೆ , ಬೆಳಗಾವಿ ಮಹರಾಷ್ಟ್ರದ ಪಾಲಾಗುತ್ತದೆ. ಈಗಾಗಲೇ ಬಳ್ಳಾರಿ ಜಿಲ್ಲೆಯನ್ನು ಎರಡು ಭಾಗಗಳಾಗಿ ‌ವಿಭಜಿಸಿದ್ದಾರೆ. ಬಸವಕಲ್ಯಾಣ ಉಪ ಚುನಾವಣೆ ಗೆಲ್ಲಲು ಮಂತ್ರಿ ಮಂಡಲ, ಶಾಸಕರ ಸಭೆಯನ್ನು ಕರೆಯದೆ ಪ್ರಾಧಿಕಾರ ರಚನೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಂದ್​ಗೆ ಬೆಂಬಲ್ ಸೂಚಿಸಿ ಬಹಿರಂಗವಾಗಿ ಬಂದು ಪ್ರತಿಭಟನೆಗೆ ಇಳಿದು ಹೋರಾಟ ನಡೆಸಬೇಕು ಎಂದು ಕೋರಿದರು. ಹಾಗೆ ಬಂದ್ ನಂತರವೂ ಮರಾಠ ಅಭಿವೃದ್ಧಿ ಪ್ರಾಧಿಕಾರ ಮುಂದುವರಿಸಿದರೆ ಜೈಲ್ ಚಳುವಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Last Updated : Nov 28, 2020, 4:23 PM IST

ABOUT THE AUTHOR

...view details