ಬೆಂಗಳೂರು: ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿದ್ದು, ಸೋಂಕಿನಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್, ಬೆಡ್, ವೆಂಟಿಲೇಟರ್ಗಳನ್ನ ಕೊಡಿ ಎಂದು ಒತ್ತಾಯಿಸಿ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟಿಸಿದರು.
ಆಕ್ಸಿಜನ್ ಕೊಡಿಸಿ ಕೊರೊನಾದಿಂದ ಪ್ರಾಣ ಉಳಿಸಿ..ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ - coronavirus treatment
ಆಕ್ಸಿಜನ್ ಕೊಡಿಸಿ ಕೊರೊನಾ ಸೋಂಕಿತರ ಪ್ರಾಣ ಉಳಿಸುವಂತೆ ರಸ್ತೆಯಲ್ಲಿ ವಾಟಾಳ್ ನಾಗರಾಜ್ ಉರುಳು ಸೇವೆ ಮಾಡಿದರು.
ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ
ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ಮೇಲೆ ಚಾಪೆ ಹಾಕಿ ಅಲ್ಲೇ ಉರುಳು ಸೇವೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು. ಖಾಸಗಿ ಆಸ್ಪತ್ರೆಗಳು ಹಗಲು ದರೋಡೆ ನಿಲ್ಲಿಸಬೇಕು. ಸರ್ಕಾರಿ ಆಸ್ಪತ್ರೆಗಳ ನರಕ ತಪ್ಪಿಸಬೇಕು. ಈಗಾಗಲೇ ಕರ್ನಾಟಕ ಸಾವಿನ ಮನೆಯಾಗಿದ್ದು, ಬೀದಿ ವ್ಯಾಪಾರಿಗಳು, ಬಡವರು, ಆಟೋ ಚಾಲಕರು ಸೇರಿದಂತೆ ಪ್ರತಿಯೊಬ್ಬರಿಗೂ ಕನಿಷ್ಠ ತಿಂಗಳಿಗೆ ಹತ್ತು ಸಾವಿರ ರೂಪಾಯಿ ನೀಡಬೇಕೆಂದು ಒತ್ತಾಯಿಸಿದರು.
ಸೋಂಕಿತರು ಸಾವನ್ನಪ್ಪಿದರೆ ಕನಿಷ್ಠ 5 ಲಕ್ಷ ರೂಪಾಯಿ ನೀಡಬೇಕು. ಇದು ಆಗದೇ ಇದ್ದರೆ ಕೇಂದ್ರದ ಮಂತ್ರಿಗಳು ಎಲ್ಲರೂ ರಾಜೀನಾಮೆ ನೀಡಬೇಕು ಎಂದರು.