ಕರ್ನಾಟಕ

karnataka

ETV Bharat / state

ನಾನು 3 ದಿನ ಪಟಾಕಿ ಹಚ್ಚುತ್ತೇನೆ, ಬೇಕಾದ್ರೆ ಜೈಲಿಗೆ ಹಾಕಲಿ.. ಸರ್ಕಾರಕ್ಕೆ ವಾಟಾಳ್ ನಾಗರಾಜ್‌ ಸವಾಲ್ - Vatal Nagaraj protest against ban on firecrackers

ದೀಪಾವಳಿ ಅಂದರೆ ಬೆಳಕಿನ ಹಬ್ಬ, ಈ ಹಬ್ಬಕ್ಕೆ ಪಟಾಕಿ ಹೊಡೆಯಲೇಬೇಕು. ಸರ್ಕಾರ ಪಟಾಕಿ ನಿಷೇಧ ಮಾಡಿರುವುದು ಸರಿ ಇಲ್ಲ. ದೀಪಾವಳಿ ಹಬ್ಬದ ದಿನದಂದು ಪಟಾಕಿ ಹೊಡೆದಿಲ್ಲ ಅಂದರೆ ಹಬ್ಬ ಪೂರ್ಣ ಆಗಲ್ಲ..

ಸರ್ಕಾರಕ್ಕೆ ವಾಟಾಳ್ ಸವಾಲ್
ಸರ್ಕಾರಕ್ಕೆ ವಾಟಾಳ್ ಸವಾಲ್

By

Published : Nov 8, 2020, 3:03 PM IST

Updated : Nov 8, 2020, 3:24 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುವ ಭೀತಿಯಿಂದ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ‌. ಇಂದು ಸರ್ಕಾರದ ಧೋರಣೆ ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಸರ್ಕಾರಕ್ಕೆ ವಾಟಾಳ್ ನಾಗರಾಜ್‌ ಸವಾಲ್

ದೀಪಾವಳಿ ಅಂದರೆ ಬೆಳಕಿನ ಹಬ್ಬ, ಈ ಹಬ್ಬಕ್ಕೆ ಪಟಾಕಿ ಹೊಡೆಯಲೇಬೇಕು. ಸರ್ಕಾರ ಪಟಾಕಿ ನಿಷೇಧ ಮಾಡಿರುವುದು ಸರಿ ಇಲ್ಲ. ದೀಪಾವಳಿ ಹಬ್ಬದ ದಿನದಂದು ಪಟಾಕಿ ಹೊಡೆದಿಲ್ಲ ಅಂದರೆ ಹಬ್ಬ ಪೂರ್ಣ ಆಗಲ್ಲ.

ಶತಮಾನಗಳಿಂದ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿಕೊಂಡು ಬರಲಾಗಿದೆ‌. ಪಟಾಕಿಯಿಂದ ಕೊರೊನಾ ವೈರಸ್ ಬರುತ್ತೆ ಅಂತಾ ಸಿಎಂ ಹೇಳುತ್ತಿದ್ದಾರೆ. ಹಸಿರು ಪಟಾಕಿಗೆ ಮಾನ್ಯತೆ ಇಲ್ಲ. ನಾನು ಮೂರು ದಿನ ಪಟಾಕಿ ಹಚ್ಚುತ್ತೇನೆ. ಬೇಕಾದ್ರೆ ಜೈಲಿಗೆ ಹಾಕಲಿ ಅಂತಾ ಸರ್ಕಾರಕ್ಕೆ ವಾಟಾಳ್‌ ನಾಗರಾಜ್‌ ಸವಾಲ್ ಹಾಕಿದರು.

Last Updated : Nov 8, 2020, 3:24 PM IST

For All Latest Updates

TAGGED:

ABOUT THE AUTHOR

...view details